July 4, 2026
Saturday, July 4, 2026
spot_img

CINE| ಎಲ್ಲೆಡೆ ‘ಗ್ರಾಮಾಯಣ’ ಹವಾ; ಚಿತ್ರದ ಯಶಸ್ಸಿನ ಬೆನ್ನಲ್ಲೇ ಸ್ಪೆಷಲ್ ವಿಡಿಯೋ ಹಂಚಿಕೊಂಡ ಶಿವಣ್ಣ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ದೊಡ್ಮನೆ ಕುಡಿ ವಿನಯ್ ರಾಜ್‌ಕುಮಾರ್ ಹಾಗೂ ಮೇಘಾ ಶೆಟ್ಟಿ ನಟನೆಯ ಬಹುನಿರೀಕ್ಷಿತ ‘ಗ್ರಾಮಾಯಣ’ ಸಿನಿಮಾ ಜುಲೈ 3 ರಂದು ಅದ್ಧೂರಿಯಾಗಿ ತೆರೆಕಂಡಿದೆ. ಚಿತ್ರಕ್ಕೆ ಎಲ್ಲೆಡೆ ಪ್ರೇಕ್ಷಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಇದನ್ನು ಕೇಳಿ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಭಾರಿ ಸಂತಸ ವ್ಯಕ್ತಪಡಿಸಿದ್ದಾರೆ.

 ‘ಗ್ರಾಮಾಯಣ’ ಬಗ್ಗೆ ಶಿವಣ್ಣ ಮಾತು

ಸಿನಿಮಾ ಬಿಡುಗಡೆಯಾಗಿ ಎಲ್ಲೆಡೆ ಸಕಾರಾತ್ಮಕ ವಿಮರ್ಶೆಗಳನ್ನು ಪಡೆದುಕೊಳ್ಳುತ್ತಿರುವುದಕ್ಕೆ ಶಿವಣ್ಣ ವಿಶೇಷ ವಿಡಿಯೋ ಸಂದೇಶದ ಮೂಲಕ ಇಡೀ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಗ್ರಾಮೀಣ ಸೊಗಡಿನ ಈ ಕಥೆಯಲ್ಲಿ ವಿನಯ್ ರಾಜ್‌ಕುಮಾರ್  “ಸಿಕ್ಸ್ತ್ ಸೆನ್ಸ್ ಸೀನಾ” ಪಾತ್ರ ಮತ್ತು ಹಳ್ಳಿ ಹೈದನ ನಟನೆ ಪ್ರೇಕ್ಷಕರಿಗೆ ತುಂಬಾ ಇಷ್ಟವಾಗಿರುವುದಕ್ಕೆ ದೊಡ್ಡಪ್ಪನಾಗಿ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:

ಶಿವಣ್ಣ ಸಿನಿಮಾ ನೋಡೋದು ಯಾವಾಗ?

ಸದ್ಯ ವೈಯಕ್ತಿಕ ಕೆಲಸಗಳ ನಿಮಿತ್ತ ಹೊರಗಡೆ ಇರುವುದರಿಂದ ಶಿವಣ್ಣಗೆ ಬಿಡುಗಡೆಯಾದ ದಿನವೇ ಚಿತ್ರವನ್ನು ನೋಡಲು ಸಾಧ್ಯವಾಗಿಲ್ಲ.”ನಾನು ಸದ್ಯದಲ್ಲೇ ಬೆಂಗಳೂರಿಗೆ ಮರಳಲಿದ್ದು, ಬಂದ ತಕ್ಷಣವೇ ಮೊದಲ ಕೆಲಸವಾಗಿ ಚಿತ್ರಮಂದಿರಕ್ಕೆ ತೆರಳಿ ‘ಗ್ರಾಮಾಯಣ’ ಸಿನಿಮಾವನ್ನು ವೀಕ್ಷಿಸುತ್ತೇನೆ” ಎಂದು ಶಿವಣ್ಣ ತಿಳಿಸಿದ್ದಾರೆ.

ದೇವನೂರು ಚಂದ್ರು ನಿರ್ದೇಶನದ ಈ ಗ್ರಾಮೀಣ ಭಾಗದ ಕಥೆಯಲ್ಲಿ, ಗ್ರಾಮ ಪಂಚಾಯಿತಿ ಚುನಾವಣೆಗಳು ಹಾಗೂ ಹಳ್ಳಿಯ ಜನರ ಜೀವನದ ಸುತ್ತ ಆಕರ್ಷಕವಾಗಿ ಕಥೆ ಹೆಣೆಯಲಾಗಿದೆ. ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತದ ಹಾಡುಗಳು ಈಗಾಗಲೇ ಸೂಪರ್ ಹಿಟ್ ಆಗಿದ್ದು, ಥಿಯೇಟರ್‌ಗಳಲ್ಲಿ ಪ್ರೇಕ್ಷಕರ ಮನ ಗೆಲ್ಲುತ್ತಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !