July 5, 2026
Sunday, July 5, 2026
spot_img

Bad Habits | ನಿಮ್ಮ ಮುಂಜಾನೆಯ ಈ ಒಂದು ತಪ್ಪು ಇಡೀ ದಿನದ ನೆಮ್ಮದಿ ಹಾಳು ಮಾಡತ್ತೆ!

ಮುಂಜಾನೆ ಎದ್ದಾಗ ಮೆದುಳು ಪ್ರಶಾಂತವಾಗಿರುತ್ತದೆ. ಆದರೆ ತಕ್ಷಣ ಫೋನ್‌ನಲ್ಲಿ ನೋಟಿಫಿಕೇಶನ್, ಇಮೇಲ್ ಅಥವಾ ನೆಗೆಟಿವ್ ಸುದ್ದಿಗಳನ್ನು ನೋಡುವುದರಿಂದ ಕಾರ್ಟಿಸೋಲ್ (ಒತ್ತಡದ ಹಾರ್ಮೋನ್) ಮಟ್ಟ ಹೆಚ್ಚಾಗುತ್ತದೆ. ಇದು ಇಡೀ ದಿನದ ಮೂಡ್ ಕೆಡಿಸುತ್ತದೆ.

ದೃಷ್ಟಿ ದೋಷ ಮತ್ತು ತಲೆನೋವು

ಕತ್ತಲೆಯಲ್ಲಿ ಅಥವಾ ಎದ್ದ ತಕ್ಷಣ ಮೊಬೈಲ್‌ನ ನೀಲಿ ಬೆಳಕಿಗೆ (Blue Light) ಕಣ್ಣುಗಳನ್ನು ಒಡ್ಡಿಕೊಳ್ಳುವುದರಿಂದ ಕಣ್ಣಿನ ಆಯಾಸ, ಶುಷ್ಕತೆ ಮತ್ತು ತಲೆನೋವು ಕಾಣಿಸಿಕೊಳ್ಳುತ್ತದೆ. ಇದು ದೀರ್ಘಾವಧಿಯಲ್ಲಿ ದೃಷ್ಟಿ ದೌರ್ಬಲ್ಯಕ್ಕೆ ಕಾರಣವಾಗಬಹುದು.

ಸಮಯದ ಪೋಲು ಮತ್ತು ಏಕಾಗ್ರತೆಯ ಕೊರತೆ

ಕೇವಲ 5 ನಿಮಿಷ ಎಂದು ಫೋನ್ ಕೈಗೆತ್ತಿಕೊಂಡರೆ, ರೀಲ್ಸ್ ಅಥವಾ ಸೋಶಿಯಲ್ ಮೀಡಿಯಾ ನೋಡುತ್ತಾ ಗಂಟೆಗಳು ಕಳೆಯುವುದೇ ತಿಳಿಯುವುದಿಲ್ಲ. ಇದರಿಂದ ದಿನದ ಕೆಲಸಗಳು ತಡವಾಗುತ್ತವೆ ಮತ್ತು ಯಾವುದೇ ಕೆಲಸದ ಮೇಲೆ ಗಮನ ನೆಡಲು ಸಾಧ್ಯವಾಗುವುದಿಲ್ಲ.

ಮೆದುಳಿನ ಕಾರ್ಯಕ್ಷಮತೆ ಕುಂಠಿತ

ಬೆಳಗ್ಗೆ ನಮ್ಮ ಮೆದುಳು ‘ಆಲ್ಫಾ’ ತರಂಗಗಳಿಂದ ‘ಬೀಟಾ’ ತರಂಗಗಳಿಗೆ ಬದಲಾಗುತ್ತಿರುತ್ತದೆ. ಈ ಸಮಯದಲ್ಲಿ ತಕ್ಷಣ ಫೋನ್ ಬಳಸುವುದರಿಂದ ಮೆದುಳಿನ ಸೃಜನಶೀಲತೆ ಮತ್ತು ಆಲೋಚನಾ ಶಕ್ತಿ ಕಡಿಮೆಯಾಗುತ್ತದೆ.

ಸಲಹೆ: ಬೆಳಗ್ಗೆ ಎದ್ದ ಕನಿಷ್ಠ 30 ರಿಂದ 60 ನಿಮಿಷಗಳ ಕಾಲ ಮೊಬೈಲ್‌ನಿಂದ ದೂರವಿರಿ. ಯೋಗ, ಧ್ಯಾನ ಅಥವಾ ಹಸಿರು ಪ್ರಕೃತಿಯನ್ನು ನೋಡುವುದರಿಂದ ನಿಮ್ಮ ದಿನ ಉಲ್ಲಾಸಭರಿತವಾಗಿರುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !