ಹೊಸದಿಗಂತ ಡಿಜಿಟಲ್ ಡೆಸ್ಕ್:
ನಗರದಲ್ಲಿ ಎಲೆಕ್ಟ್ರಿಕ್ ಬಸ್‌ಗಳಿಗೆ ಸಂಬಂಧಿಸಿದ ಅಪಘಾತಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.
ಹೊಸ ಇವಿ ಬಸ್‌ಗಳ ಖರೀದಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಮೊದಲು ಅವುಗಳ ಸುರಕ್ಷತೆ ಮತ್ತು ಕಾರ್ಯಕ್ಷಮತೆ ಬಗ್ಗೆ ಸಮಗ್ರ ಅಧ್ಯಯನ ನಡೆಸಲು ಸೂಚನೆ ನೀಡಲಾಗಿದೆ.
ಅಧ್ಯಯನಕ್ಕೆ ಸರ್ಕಾರದ ಸೂಚನೆ
ಸಾರಿಗೆ ಸಚಿವರ ನಿರ್ದೇಶನದಂತೆ ಸಾರಿಗೆ ಇಲಾಖೆ ಇವಿ ಬಸ್‌ಗಳ ಕಾರ್ಯಕ್ಷಮತೆ, ತಾಂತ್ರಿಕ ಅಂಶಗಳು ಹಾಗೂ ಅಪಘಾತಗಳ ಕಾರಣಗಳನ್ನು ಪರಿಶೀಲಿಸುವ ವರದಿ ಸಿದ್ಧಪಡಿಸಲಿದೆ.
ಇದನ್ನೂ ಓದಿ:
ಅಧ್ಯಯನ ವರದಿ ಬಂದ ನಂತರವೇ ಹೊಸ ಎಲೆಕ್ಟ್ರಿಕ್ ಬಸ್‌ಗಳ ಖರೀದಿ ಕುರಿತು ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ವರದಿ ಸಿಗುವವರೆಗೆ ಖರೀದಿ ಪ್ರಕ್ರಿಯೆ ಮುಂದುವರಿಯುವುದಿಲ್ಲ.
1,500 ಬಸ್ ಸೇರ್ಪಡೆಗೆ ತಡೆ
ಈ ವರ್ಷ ರಾಜ್ಯದ ವಿವಿಧ ಸಾರಿಗೆ ನಿಗಮಗಳಿಗೆ ಸುಮಾರು 1,500 ಹೊಸ ಇವಿ ಬಸ್‌ಗಳು ಸೇರ್ಪಡೆಯಾಗಬೇಕಿತ್ತು. ಆದರೆ ಸುರಕ್ಷತಾ ಪರಿಶೀಲನೆಗೆ ಆದ್ಯತೆ ನೀಡಿರುವ ಹಿನ್ನೆಲೆಯಲ್ಲಿ ಆ ಯೋಜನೆ ತಾತ್ಕಾಲಿಕವಾಗಿ ಮುಂದೂಡಲಾಗಿದೆ.



