ಹೊಸದಿಗಂತ ಡಿಜಿಟಲ್ ಡೆಸ್ಕ್:
ಇನ್ಸ್ಟಾಗ್ರಾಮ್ನಲ್ಲಿ ಮಕ್ಕಳ ಲೈಂಗಿಕ ಶೋಷಣೆ ಹಾಗೂ ದೌರ್ಜನ್ಯಕ್ಕೆ ಸಂಬಂಧಿಸಿದ (CSEAM) ಅಕ್ರಮ ಜಾಹೀರಾತುಗಳು ಕಾಣಿಸಿಕೊಂಡಿರುವ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮೆಟಾಗೆ ನೋಟಿಸ್ ಜಾರಿಗೊಳಿಸಿದೆ.
7 ದಿನಗಳಲ್ಲಿ ವರದಿ
ಏಳು ದಿನಗಳೊಳಗೆ ಸಮಗ್ರ ವಿವರಣೆ ಸಲ್ಲಿಸುವಂತೆ ಹಾಗೂ ಇಂತಹ ಎಲ್ಲಾ ಜಾಹೀರಾತುಗಳನ್ನು ತಕ್ಷಣವೇ ತೆಗೆದುಹಾಕುವಂತೆ ಸೂಚಿಸಿದೆ.
ಸರ್ಕಾರವು ಮಕ್ಕಳ ಸುರಕ್ಷತೆಯನ್ನು ಅತ್ಯಂತ ಗಂಭೀರ ವಿಷಯವಾಗಿ ಪರಿಗಣಿಸಿದ್ದು, ಇಂತಹ ಅಕ್ರಮ ವಿಷಯಗಳು ಮತ್ತೆ ಪ್ರಸಾರವಾಗದಂತೆ ಬಲವಾದ ಸುರಕ್ಷತಾ ವ್ಯವಸ್ಥೆ ಜಾರಿಗೊಳಿಸುವಂತೆ ನಿರ್ದೇಶಿಸಿದೆ. ಸಮರ್ಪಕ ಉತ್ತರ ನೀಡದಿದ್ದರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಲಾಗಿದೆ.
ಈ ಬೆಳವಣಿಗೆಗೆ ಕಾರಣವಾದ ವರದಿಯಲ್ಲಿ, ಕೆಲವು ಇನ್ಸ್ಟಾಗ್ರಾಮ್ ಜಾಹೀರಾತುಗಳು ಬಳಕೆದಾರರನ್ನು ಅಕ್ರಮ ಮಕ್ಕಳ ಲೈಂಗಿಕ ದೌರ್ಜನ್ಯ ವಿಷಯವಿದ್ದ ಟೆಲಿಗ್ರಾಮ್ ಚಾನೆಲ್ಗಳಿಗೆ ಕರೆದೊಯ್ಯುತ್ತಿದ್ದವು ಎಂಬ ಆರೋಪ ಕೇಳಿಬಂದಿತ್ತು. ಆರೋಪದ ಬಳಿಕ ಸಂಬಂಧಿತ ಜಾಹೀರಾತುಗಳು ಮತ್ತು ಖಾತೆಗಳನ್ನು ತೆಗೆದುಹಾಕಿರುವುದಾಗಿ ಮೆಟಾ ತಿಳಿಸಿದೆ.



