August 27, 2026
Thursday, August 27, 2026
spot_img

33 ದಿನಗಳ ಶಿವಯೋಗ ಸಮಾಧಿ ಅನುಷ್ಠಾನ ಪೂರ್ಣ: ಭಕ್ತರಿಗೆ ದರುಶನ ನೀಡಿದ ಶಿವಾಚಾರ್ಯ ಶ್ರೀಗಳು

ಹೊಸದಿಗಂತ ವರದಿ ಗದಗ:

ಗದಗ ತಾಲೂಕಿನ ಅಂತೂರ-ಬೆಂತೂರ ಗ್ರಾಮದ ಜಗದ್ಗುರು ಬೂದೀಶ್ವರ ಸಂಸ್ಥಾನ ಮಠದಲ್ಲಿ ಲೋಕ ಕಲ್ಯಾಣಕ್ಕಾಗಿ ಹಮ್ಮಿಕೊಳ್ಳಲಾಗಿದ್ದ ಐತಿಹಾಸಿಕ ಶಿವಯೋಗ ಸಮಾ ಅನುಷ್ಠಾನವು ಭಾನುವಾರ ಅತ್ಯಂತ ಯಶಸ್ವಿಯಾಗಿ ಸಂಪೂರ್ಣಗೊಂಡಿದೆ.

ಮಠದ ಪೀಠಾಪತಿ ಡಾ.ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು ಕಳೆದ ೩೩ ದಿನಗಳಿಂದ (೭೭೫ ಗಂಟೆಗಳು) ಅನ್ನ, ನೀರು ಹಾಗೂ ಗಾಳಿ-ಬೆಳಕಿಲ್ಲದೆ ನಡೆಸಿದ ಈ ಕಠಿಣ ಯೋಗಸಾಧನೆ ವಿಜ್ಞಾನಕ್ಕೇ ಸವಾಲೊಡ್ಡಿದೆ.

ಮಹದಾಯಿ ಯೋಜನೆ ಶೀಘ್ರವಾಗಿ ಜಾರಿಯಾಗಲಿ, ದೇಶ ಕಾಯುವ ಯೋಧರಿಗೆ ಹಾಗೂ ದೇಶಕ್ಕೆ ಅನ್ನ ನೀಡುವ ರೈತರಿಗೆ ಒಳಿತಾಗಲಿ ಎಂಬ ಉದಾತ್ತ ಉದ್ದೇಶದೊಂದಿಗೆ ಜೂ.೩ ರಂದು ಶ್ರೀಗಳು ಈ ಕಠಿಣ ತಪಸ್ಸನ್ನು ಕೈಗೊಂಡಿದ್ದರು. ಅದಕ್ಕಾಗಿ ಶ್ರೀಮಠದ ಕಲ್ಲಿನ ಮಂಟಪದ ಮುಖ್ಯದ್ವಾರವನ್ನು ಕಲ್ಲು ಮತ್ತು ಸಿಮೆಂಟ್‌ನಿಂದ ಸಂಪೂರ್ಣವಾಗಿ ಮುಚ್ಚಲಾಗಿತ್ತು. ಭಾನುವಾರ ಅನುಷ್ಠಾನದ ಕೊನೆಯ ದಿನವಾದ್ದರಿಂದ, ನಾಡಿನ ವಿವಿಧ ಮಠಾಶರು ಪೂಜಾ ವಿವಿಧಾನಗಳನ್ನು ನೆರವೇರಿಸಿ ಮಂಟಪದ ದ್ವಾರವನ್ನು ತೆರೆದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !