ಹೊಸದಿಗಂತ ವರದಿ ಉತ್ತರಕನ್ನಡ:
ಖಾನಾಪುರ ಪಟ್ಟಣ ಸೇರಿದಂತೆ ತಾಲೂಕಿನ ಅರಣ್ಯಪ್ರದೇಶದಲ್ಲಿ ಕಳೆದ ಐದು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯ ಪರಿಣಾಮ ಭಾನುವಾರ ತಾಲೂಕಿನ ಇಟಗಿಯ ಮರುಳಶಂಕರ ಮತ್ತು ಹಬ್ಬನಹಟ್ಟಿಯ ಆಂಜನೇಯ ದೇಗುಲಗಳು ಮಲಪ್ರಭಾ ನದಿಯಲ್ಲಿ ಬಹುತೇಕ ಮುಳುಗಡೆಗೊಂಡಿವೆ.
ತಾಲೂಕಿನ ಅರ್ಧದಷ್ಟು ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ.ಪಟ್ಟಣ ಸೇರಿದಂತೆ ತಾಲೂಕಿನ ಬಹುತೇಕ ಕಡೆಗಳಲ್ಲಿ ಶನಿವಾರ ರಾತ್ರಿ ಮತ್ತು ಭಾನುವಾರ ಇಡೀ ದಿನ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಿದ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿದೆ.
ಮಳೆಯ ಕಾರಣವೊಡ್ಡಿ ಬೇಕಾಬಿಟ್ಟಿ ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಿರುವ ಹೆಸ್ಕಾಂ ಕ್ರಮವನ್ನು ನಾಗರಿಕರು ಖಂಡಿಸಿದ್ದಾರೆ.



