July 6, 2026
Monday, July 6, 2026
spot_img

ನಿರೀಕ್ಷೆ ಸುಳ್ಳು ಮಾಡಿದ ವೀಕೆಂಡ್‌ ಕಲೆಕ್ಷನ್ಸ್‌, ʼಆಲ್ಫಾʼ ನೋಡೋಕೆ ಜನ ಥಿಯೇಟರ್‌ಗೆ ಹೋಗ್ತಿಲ್ಲ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟಿ ಆಲಿಯಾ ಭಟ್‌ ಹಾಗೂ ಶರ್ವರಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಆಕ್ಷನ್‌ ಸ್ಪೈ ಸಿನಿಮಾ ಆಲ್ಫಾ ಸಿನಿಮಾ ಅಷ್ಟೇನೂ ಗಳಿಕೆ ಮಾಡುತ್ತಿಲ್ಲ. ಯಶ್‌ ರಾಜ್‌ ಫಿಲ್ಮ್ಸ್‌ ಸ್ಪೈ ಯೂನಿವರ್ಸ್‌ನ ಬಹುನಿರೀಕ್ಷಿತ ಆಕ್ಷನ್‌ ಥ್ರಿಲ್ಲರ್‌ ಸಿನಿಮಾ ಇದಾಗಿದ್ದು, ವೀಕೆಂಡ್‌ನಲ್ಲಿ ಭಾರೀ ಗಳಿಕೆ ಮಾಡುವ ನಿರೀಕ್ಷೆ ಇತ್ತು. ಆದರೆ ಇದು ಕೂಡ ಸುಳ್ಳಾಗಿದೆ.

ಈ ಚಿತ್ರ, ಭಾನುವಾರದ ರಜಾದಿನದಂದೂ ದೊಡ್ಡ ಮಟ್ಟದ ಚೇತರಿಕೆ ಕಾಣದೆ ಪ್ರೇಕ್ಷಕರಿಂದ ತಣ್ಣಗಿನ ಪ್ರತಿಕ್ರಿಯೆ ಪಡೆದಿದೆ. ಇದರಿಂದ ನಿರ್ಮಾಪಕರಿಗೆ ನಷ್ಟದ ಭೀತಿ ಎದುರಾಗಿದೆ.ಸಾಮಾನ್ಯವಾಗಿ ದೊಡ್ಡ ಬಜೆಟ್ ಸಿನಿಮಾಗಳಿಗೆ ಮೊದಲ ಭಾನುವಾರ ಅತ್ಯಂತ ನಿರ್ಣಾಯಕ.

ಆದರೆ, ದೇಶಾದ್ಯಂತ ಬರೋಬ್ಬರಿ 7,439 ಶೋಗಳು ಪ್ರದರ್ಶನ ಕಂಡಿದ್ದರೂ, ಚಿತ್ರದ ಆಕ್ಯುಪೆನ್ಸಿ ಕೇವಲ 29.0% ದಾಟಲು ಸಾಧ್ಯವಾಗಿಲ್ಲ. ಚಿತ್ರಮಂದಿರಗಳಲ್ಲಿ ಅರ್ಧಕ್ಕಿಂತ ಹೆಚ್ಚು ಸೀಟುಗಳು ಖಾಲಿ ಉಳಿದಿದ್ದು, ಸಿನಿಮಾ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಚಿತ್ರವು 3ನೇ ದಿನ (ಭಾನುವಾರ) ಭಾರತದಲ್ಲಿ ಕೇವಲ 13.25 ಕೋಟಿ ನೆಟ್ ಕಲೆಕ್ಷನ್ ಮಾಡಿದೆ. 13 ಕೋಟಿ ರೂಪಾಯಿ ದೊಡ್ಡ ಮೊತ್ತವೇ. ಆದರೆ, ಸಿನಿಮಾಗೆ ಸಿಕ್ಕ ಶೋಗಳ ಸಂಖ್ಯೆ ನೋಡಿದರೆ ಈ ಗಳಿಕೆ ತುಂಬಾನೇ ಅಲ್ಪ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !