ಹೊಸದಿಗಂತ ಯಲ್ಲಾಪುರ :
ತಾಲೂಕಿನ ಕಿರವತ್ತಿಯ ಡೊಮಗೇರಿಯಲ್ಲಿ ಅಂಗನವಾಡಿ ಮುಗಿಸಿ ಮನೆಗೆ ತೆರಳುತ್ತಿದ್ದ ಮಕ್ಕಳ ಮೇಲೆ ಬೃಹತ್ ಅತ್ತಿ ಮರವೊಂದು ಉರುಳಿ ಬಿದ್ದ ಪರಿಣಾಮ ಗರ್ಭಿಣಿ ಮಹಿಳೆಯರ್ವಳು ದಾರುಣ ಸಾವು ಕಂಡಿದ್ದು, ಕೆಲ ಮಕ್ಕಳು ತೀವೃವಾಗಿಗಾಯಗೊಂಡಿದ್ದಾರೆ.
ಸೋಮವಾರ ಸಂಜೆ ಈ ಘಟನೆ ನಡೆದಿದ್ದು, ಮಕ್ಕಳನ್ನು ಮನೆಗೆ ಕರೆತರಲು ತೆರಳಿದ್ದ ೫ ತಿಂಗಳ ಗರ್ಭಿಣಿ ಸಾವಿತ್ರಿ ಬಾಬು ಖರಾತ್(೨೮) ಘಟನೆಯಲ್ಲಿ ಸಾವನ್ನೊಪ್ಪಿದ್ದಾರೆ. ಗಾಯಾಳುಗಳಾದ ಸ್ವಾತಿ ಬಾಬು ಖರಾತ್ (೧೭), ಘಾಟು ಲಕ್ಕು ಕೊಕರೆ (೫), ಶ್ರಾವಣಿ ಬಾಬು ಖರಾತ್ (೨), ಶಾಂಭವಿ ಬಾಬು ಖರಾತ್ (೪) ತೀವೃವಾಗಿಗಾಯಗೊಂಡಿದ್ದು ಹೆಚ್ಚಿನಚಿಕೆತ್ಸೆಗಾಗಿ ಹುಬ್ಬಳ್ಳಿಗೆ ರವಾನಿಸಲಾಗಿದೆ. ಇನ್ನುಳಿದಂತೆ ಸಾನ್ವಿ ಬಾಬು ಕೊಕರೆ (೫), ವಿನಯ್ ಲಕ್ಕು ಖರಾತ್ (೫), ಅನುಶ್ರೀ ಮಾಂಬುಕೊಕರೆ (೫) ಘಟನೆಯಲ್ಲಿಅದೃಷ್ಟವಶಾತ್ ಪಾರಾಗಿದ್ದಾರೆ.
ಘಟನೆಕುರಿತು ತಿಳಿಯುತ್ತಿದ್ದಂತೆ ಸಿಪಿಐ ರಮೇಶ ಹನಾಪೂರ, ಪೊಲೀಸ್ ಸಿಬ್ಬಂದಿಗಳು ಮತ್ತು ಹೆಸ್ಕಾಂ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ರಕ್ಷಣಾಕಾರ್ಯ ನಡೆಸಿದರು. ಯಲ್ಲಾಪುರ ಪೊಲೀಸ್‌ಠಾಣೆಯಲ್ಲಿ ಪ್ರಕರಣದಾಖಲಾಗಿದೆ.
ಶಾಸಕ ಶಿವರಾಮ ಹೆಬ್ಬಾರ್‌ಅವರು ಸುದ್ದಿ ತಿಳಿದ ತಕ್ಷಣವೇ ಸರಕಾರಿಆಸ್ಪತ್ರೆಗೆ ಭೇಟಿ ನೀಡಿ, ಪಾರ್ಥಿವ ಶರೀರಕ್ಕೆಅಂತಿಮ ನಮನ ಸಲ್ಲಿಸಿದರು. ದುಃಖಿತರಾದಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಧೈರ್ಯತುಂಬಿದರು ಹಾಗೂ ಸರ್ಕಾರದಿಂದಅಗತ್ಯ ಪರಿಹಾರಒದಗಿಸುವ ಭರವಸೆಯನ್ನು ನೀಡಿದರು.