July 6, 2026
Monday, July 6, 2026
spot_img

‘ಫ್ರೆಶ್’, ‘100% ಆರ್ಗ್ಯಾನಿಕ್’ ಲೇಬಲ್‌ ಗಳಿಗೆ ಬ್ರೇಕ್: ಪ್ರಮುಖ ಫುಡ್ ಬ್ರ್ಯಾಂಡ್‌ಗಳಿಗೆ fssai ನೋಟಿಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಹಾರ ಉತ್ಪನ್ನಗಳ ಮೇಲೆ ಗ್ರಾಹಕರನ್ನು ದಾರಿ ತಪ್ಪಿಸುವ ರೀತಿಯ ಜಾಹೀರಾತು ಹಾಗೂ ಲೇಬಲ್‌ಗಳನ್ನು ಬಳಸಿದ ಆರೋಪದಡಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಹಲವು ಆಹಾರ ಕಂಪನಿಗಳಿಗೆ ನೋಟಿಸ್ ಜಾರಿ ಮಾಡಿದೆ.

ಕೆಲವು ಉತ್ಪನ್ನಗಳಲ್ಲಿ ‘Fresh’, ‘Healthy’, ‘All Natural’, ‘100% Organic’, ‘Vegan’ ಮತ್ತು ‘FSSAI Approved’ ಎಂಬ ಪದಗಳನ್ನು ನಿಯಮಗಳಿಗೆ ವಿರುದ್ಧವಾಗಿ ಬಳಸಲಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಸಂಬಂಧಿತ ಸಂಸ್ಥೆಗಳಿಗೆ ಏಳು ದಿನಗಳೊಳಗೆ ಸ್ಪಷ್ಟನೆ ನೀಡುವಂತೆ ಸೂಚಿಸಲಾಗಿದೆ.

ಇದನ್ನೂ ಓದಿ:

ಹಲವು ಉತ್ಪನ್ನಗಳಲ್ಲಿ ವೈಜ್ಞಾನಿಕ ಆಧಾರವಿಲ್ಲದೆ ಆರೋಗ್ಯ ಸಂಬಂಧಿತ ಪ್ರಯೋಜನಗಳ ಬಗ್ಗೆ ಹೇಳಿಕೆ ನೀಡಿರುವುದು, ಅಗತ್ಯ ಪ್ರಮಾಣೀಕರಣವಿಲ್ಲದೆ ಆರ್ಗ್ಯಾನಿಕ್ ಹಾಗೂ ವೀಗನ್ ಎಂಬ ಪದಗಳನ್ನು ಬಳಸಿರುವುದು ಮತ್ತು ಉತ್ಪನ್ನದ ಮಾಹಿತಿಯಲ್ಲಿ ಲೋಪಗಳಿರುವುದು ಪ್ರಮುಖ ಆರೋಪಗಳಾಗಿವೆ.

ಗ್ರಾಹಕರಿಗೆ ತಪ್ಪು ಮಾಹಿತಿ ನೀಡುವ ಯಾವುದೇ ಜಾಹೀರಾತು ಅಥವಾ ಲೇಬಲ್‌ಗಳನ್ನು ಸಹಿಸಲಾಗುವುದಿಲ್ಲ ಎಂದು FSSAI ಸ್ಪಷ್ಟಪಡಿಸಿದ್ದು, ನಿಯಮ ಉಲ್ಲಂಘಿಸಿದ ಕಂಪನಿಗಳು ತಕ್ಷಣವೇ ಅಗತ್ಯ ತಿದ್ದುಪಡಿ ಕೈಗೊಳ್ಳುವಂತೆ ಸೂಚಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !
Skip to toolbar