ಹೊಸದಿಗಂತ ವರದಿ ಯಾದಗಿರಿ:
ಸಾಲಬಾಧೆ ತಾಳದೆ ಜಿಲ್ಲೆಯಲ್ಲಿ 24 ಗಂಟೆಗಳಲ್ಲಿ ಇಬ್ಬರು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ವಡಿಗೇರಾ ಪಟ್ಟಣದ ಬಸವನಗರದ ನಿವಾಸಿ ರಾಮಣ್ಣ ನೇಣು ಬಿಗುದುಕೊಂಡು ಆತ್ಮಹತ್ಯೆ ಮಾಡಿಕೊಂಡರೆ, ಶಹಾಪುರ ತಾಲೂಕಿನ ಚಟ್ನಳ್ಳಿ ಗ್ರಾಮದ ರೈತರ ಮಲ್ಲಿಕಾರ್ಜುನ (38) ಸೋಮವಾರ ಸಂಜೆ ತಮ್ಮ ಜಮೀನಿನಲ್ಲಿ ಕ್ರಿಮಿನಾಶಕ ಸೇವಿಸಿ ಉಸಿರು ಚೆಲ್ಲಿದ್ದಾರೆ.
ರೈತರ ಆತ್ಮಹತ್ಯೆ ಮಾಡಿಕೊಂಡ್ರು ಪೊಲೀಸರು ಎಫ್ಐಆರ್ ದಾಖಲಿಸಿಕೊಳ್ಳಲು ವಿಳಂಬ ಮಾಡುತ್ತಿದ್ದು ಇದರಿಂದ ಮರೋತ್ತರ ಪರೀಕ್ಷೆಗಾಗಿ ಇಲ್ಲಿನ ಯಿಮ್ಸ್ ಮುಂದೆ ಕುಟುಂಬಸ್ಥರು ಶವಗಳನಗು ಇಟ್ಟುಕೊಂಡು ಕಾಯುವಂತಾಗಿದೆ.
ಅದೇ ರೀತಿ ಇಂದು ಬೆಳಿಗ್ಗೆ ಚಟ್ನಳ್ಳಿಯ ರೈತ ಮಲ್ಲಿಕಾರ್ಜುನ ಆತ್ಮಹತ್ಯೆ ಮಾಡಿಕೊಂಡಿದ್ದು ಶಹಾಪುರ ಪೊಲಿಸರು ಕೇಸ್ ದಾಖಲಿಸಿಕೊಳ್ಳಲು ವಿಳಂಬ ಮಾಡುತ್ತಿದ್ದಾರೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.



