July 23, 2026
Thursday, July 23, 2026
spot_img

HAIR CARE| ಮೆಹಂದಿ ಹಚ್ಚಿದರೂ ಬಿಳಿ ಕೂದಲು ಕಪ್ಪಾಗುತ್ತಿಲ್ಲವೇ? ಈ ಸಿಂಪಲ್ ಟ್ರಿಕ್ ಫಾಲೋ ಮಾಡಿ!

ಇತ್ತೀಚಿನ ದಿನಗಳಲ್ಲಿ ಸಣ್ಣ ವಯಸ್ಸಿನಲ್ಲೇ ಕೂದಲು ಬಿಳಿಯಾಗುವುದು ಸಾಮಾನ್ಯ ಸಮಸ್ಯೆಯಾಗಿದೆ. ರಾಸಾಯನಿಕಯುಕ್ತ ಹೇರ್ ಡೈ ಬಳಸಲು ಹೆದರಿ ಅನೇಕರು ನೈಸರ್ಗಿಕ ಮೆಹಂದಿ ಮೊರೆ ಹೋಗುತ್ತಾರೆ. ಆದರೆ, ಮೆಹಂದಿ ಹಚ್ಚಿದಾಗ ಬಿಳಿ ಕೂದಲು ಕಪ್ಪಾಗುವ ಬದಲು ಕೆಂಪು, ತಾಮ್ರ ಅಥವಾ ಕಿತ್ತಳೆ ಬಣ್ಣಕ್ಕೆ ತಿರುಗುತ್ತದೆ. ಈ ಸಮಸ್ಯೆಗೆ ಇಲ್ಲಿದೆ ಒಂದು ಸೂಪರ್ ಟ್ರಿಕ್.

ಮನೆಯಲ್ಲೇ ಯಾವುದೇ ರಾಸಾಯನಿಕ ಇಲ್ಲದೆ ಬಿಳಿ ಕೂದಲನ್ನು ಸಂಪೂರ್ಣ ಕಡು ಕಪ್ಪು ಬಣ್ಣಕ್ಕೆ ತಿರುಗಿಸಲು ‘ಇಂಡಿಗೋ ಪುಡಿ’ ಅತ್ಯುತ್ತಮ ಆಯುರ್ವೇದ ಪರಿಹಾರವಾಗಿದೆ.

ಮೆಹಂದಿ ಪುಡಿ ಬಳಕೆ

ಮೊದಲು ಮೆಹಂದಿ ಪುಡಿಗೆ ಚಹಾ ಅಥವಾ ಕಾಫಿ ಡಿಕಾಕ್ಷನ್ ಸೇರಿಸಿ ರಾತ್ರಿಯಿಡೀ ಕಬ್ಬಿಣದ ಕಡಾಯಿಯಲ್ಲಿ ನೆನೆಸಿಡಬೇಕು. ನಂತರ ಮರುದಿನ ಬೆಳಿಗ್ಗೆ ಇದನ್ನು ಕೂದಲಿಗೆ ಹಚ್ಚಿ 2 ಗಂಟೆಗಳ ಕಾಲ ಬಿಟ್ಟು, ಕೇವಲ ಸಾಮಾನ್ಯ ನೀರಿನಿಂದ ಕೂದಲನ್ನು ತೊಳೆಯಬೇಕು. ಈಗ ಬಿಳಿ ಕೂದಲು ಕೆಂಪು ಬಣ್ಣಕ್ಕೆ ತಿರುಗಿರುತ್ತದೆ.

ಇಂಡಿಗೋ ಪುಡಿ ಬಳಕೆ

ಮೆಹಂದಿ ಹಚ್ಚಿ ತೊಳೆದ ನಂತರ ಅಥವಾ ಮರುದಿನ ಇಂಡಿಗೋ ಪುಡಿಗೆ ಉಗುರುಬೆಚ್ಚಗಿನ ನೀರು ಮತ್ತು ಒಂದು ಚಿಟಿಕೆ ಉಪ್ಪು ಸೇರಿಸಿ ಪೇಸ್ಟ್ ಮಾಡಿಕೊಂಡು. ಕೂದಲಿಗೆ ಹಚ್ಚಿ 1 ರಿಂದ 1.5 ಗಂಟೆಗಳ ಕಾಲ ಒಣಗಲು ಬಿಟ್ಟು, ನಂತರ ಸಾಮಾನ್ಯ ನೀರಿನಿಂದ ತೊಳೆಯಬೇಕು.  ಇದು ನಿಮ್ಮ ಕೆಂಪು ಕೂದಲು ಸಂಪೂರ್ಣ ನೈಸರ್ಗಿಕ ಕಪ್ಪು ಬಣ್ಣಕ್ಕೆ ಬದಲಾಗುತ್ತದೆ.

ಇದನ್ನೂ ಓದಿ:

ಎಚ್ಚರಿಕೆ:

ಇಂಡಿಗೋ ಹಚ್ಚಿದ ಬಳಿಕ ಕನಿಷ್ಠ 2 ದಿನ ಕೂದಲಿಗೆ ಶಾಂಪೂ ಹಚ್ಚಬಾರದು. ಕೇವಲ ನೀರಿನಿಂದಷ್ಟೇ ತೊಳೆಯಬೇಕು. 2 ದಿನಗಳ ನಂತರ ತಲೆಗೆ ಎಣ್ಣೆ ಹಚ್ಚಿ ಶಾಂಪೂ ಸ್ನಾನ ಮಾಡಬೇಕು.

ಮಾರುಕಟ್ಟೆಯಲ್ಲಿ ಸಿಗುವ ಕೆಮಿಕಲ್ ಮುಕ್ತ 100% ಶುದ್ಧ ಆರ್ಗಾನಿಕ್ ಮೆಹಂದಿ ಮತ್ತು ಇಂಡಿಗೋ ಪುಡಿಯನ್ನೇ ಆಯ್ಕೆ ಮಾಡಿಕೊಳ್ಳುವುದು ಉತ್ತಮ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !