July 8, 2026
Wednesday, July 8, 2026
spot_img

ಕಳೆದ ಬಾರಿಗಿಂತ 8 ಪಟ್ಟು ತೀವ್ರ ದಾಳಿ! ಇರಾನ್‌ನ 80ಕ್ಕೂ ಹೆಚ್ಚು ಮಿಲಿಟರಿ ತಾಣಗಳು ಉಡೀಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಾರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳನ್ನು ಗುರಿಯಾಗಿಸಿಕೊಂಡು ಇರಾನ್ ಪಡೆಗಳು ನಡೆಸಿದ್ದ ದಾಳಿಗೆ ಅಮೆರಿಕ ಭೀಕರವಾಗಿಯೇ ತಿರುಗೇಟು ನೀಡಿದೆ. ಇದಕ್ಕೆ ಪ್ರತೀಕಾರವಾಗಿ ಯುಎಸ್‌ಎ ಮಿಲಿಟರಿ ಪಡೆಗಳು ಇರಾನ್ ಇತಿಹಾಸದಲ್ಲೇ ಕಂಡು ಕೇಳರಿಯದ ಸರಣಿ ವಾಯುದಾಳಿಗಳನ್ನು ಆರಂಭಿಸಿದ್ದು, ಇಡೀ ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ ಕವಿಯುವಂತೆ ಮಾಡಿದೆ.

ಖಮೇನಿ ಅಂತ್ಯಕ್ರಿಯೆ ವೇಳೆ ಆಘಾತ

ವಿಶೇಷವೆಂದರೆ, ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯ ವಿಧಿವಿಧಾನಗಳು ನಡೆಯುತ್ತಿರುವ ಸಂದರ್ಭದಲ್ಲೇ ಅಮೆರಿಕ ಈ ವಿನಾಶಕಾರಿ ದಾಳಿ ಸಂಘಟಿಸಿದೆ. ಈ ಅನಿರೀಕ್ಷಿತ ಮಿಲಿಟರಿ ಆಪರೇಷನ್ ಜಾಗತಿಕ ಮಟ್ಟದಲ್ಲಿ ತೀವ್ರ ಆತಂಕ ಹಾಗೂ ಸಂಚಲನಕ್ಕೆ ಕಾರಣವಾಗಿದೆ.

80ಕ್ಕೂ ಹೆಚ್ಚು ಮಿಲಿಟರಿ ನೆಲೆಗಳು ಧ್ವಂಸ

ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ನೀಡಿರುವ ಅಧಿಕೃತ ಮಾಹಿತಿ ಪ್ರಕಾರ, ಇರಾನ್ ದೇಶದ ಒಳಗಿರುವ ಕನಿಷ್ಠ 80ಕ್ಕೂ ಹೆಚ್ಚು ಆಯಕಟ್ಟಿನ ಮಿಲಿಟರಿ ಮತ್ತು ರಕ್ಷಣಾ ತಾಣಗಳನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ.

ಜೂನ್‌ಗಿಂತ 8 ಪಟ್ಟು ಭೀಕರ ರೂಪ

ಕಳೆದ ಜೂನ್ ತಿಂಗಳಿನಲ್ಲಿ ನಡೆದಿದ್ದ ವಾಯುದಾಳಿಗೆ ಹೋಲಿಸಿದರೆ ಈ ಬಾರಿಯ ಆಪರೇಷನ್ ಬರೋಬ್ಬರಿ ಎಂಟು ಪಟ್ಟು ಹೆಚ್ಚು ತೀವ್ರ ಹಾಗೂ ದೊಡ್ಡದಾಗಿದೆ ಎಂದು ಅಮೆರಿಕದ ಹಿರಿಯ ರಕ್ಷಣಾ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಅಮೆರಿಕದ ಈ ರೌದ್ರಾವತಾರ ಇರಾನ್ ಮಿಲಿಟರಿ ಬೆನ್ನೆಲುಬನ್ನೇ ಮುರಿಯುವ ಮುನ್ಸೂಚನೆ ನೀಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !