July 8, 2026
Wednesday, July 8, 2026
spot_img

ಕಾಂತಾರ ಚಾಪ್ಟರ್ 2: ಚಿತ್ರರಂಗದಲ್ಲಿ ಮತ್ತೆ ಇತಿಹಾಸ ಸೃಷ್ಟಿಸಲು ರೆಡಿಯಾಗ್ತಿದೆ ರಿಷಬ್ ರೈಟಿಂಗ್ ಟೀಮ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಕ್ಸ್ ಆಫೀಸ್ ಧೂಳೀಪಟ ಮಾಡಿದ್ದ ‘ಕಾಂತಾರ: ಚಾಪ್ಟರ್ 1’ ಯಶಸ್ಸಿನ ಬೆನ್ನಲ್ಲೇ, ಈ ಫ್ರಾಂಚೈಸಿಯ ಮುಂದಿನ ಭಾಗದ (ಕಾಂತಾರ 3) ಬಗ್ಗೆ ಅಧಿಕೃತ ಅಪ್ಡೇಟ್ ಸಿಕ್ಕಿದೆ. ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ‘ಕಾಂತಾರ ಚಾಪ್ಟರ್ 2’ ಚಿತ್ರದ ಚಿತ್ರಕಥೆ ಬರೆಯುವ ಕೆಲಸಕ್ಕೆ ಚಾಲನೆ ನೀಡಿರುವುದಾಗಿ ಅಂತರರಾಷ್ಟ್ರೀಯ ಮಾಧ್ಯಮವೊಂದರಲ್ಲಿ ಘೋಷಿಸಿದ್ದಾರೆ. ತಮ್ಮ ಲೇಖಕರ ತಂಡದೊಂದಿಗೆ ಈಗಾಗಲೇ ಸ್ಕ್ರಿಪ್ಟ್ ಲೀಗಲಿ ಆರಂಭವಾಗಿದ್ದು, ನಿರ್ದೇಶನದಲ್ಲೇ ತಮಗೆ ನಿಜವಾದ ನೆಮ್ಮದಿ ಸಿಗುತ್ತದೆ ಎಂದು ರಿಷಬ್ ಹೇಳಿದ್ದಾರೆ.

ಏನಿರಲಿದೆ ಮುಂದಿನ ಕಥೆ?

ದೈವಿಕ ಶಕ್ತಿಗಳ ಹಿನ್ನೆಲೆಯುಳ್ಳ ಈ ಹೊಸ ಭಾಗದಲ್ಲಿ ರಾಜಮನೆತನ ಹಾಗೂ ಬುಡಕಟ್ಟು ಸಮುದಾಯದ ನಡುವಿನ ಮುಂದಿನ ತಲೆಮಾರಿನ ಸಂಘರ್ಷ ಅನಾವರಣಗೊಳ್ಳಲಿದೆ. ‘ಕಾಂತಾರ ಚಾಪ್ಟರ್ 1’ ರಲ್ಲಿ ಕ್ರೂರ ರಾಜ ಮತ್ತು ಬುಡಕಟ್ಟು ಜನರ ಬಿಗ್ ಫೈಟ್ ತೋರಿಸಲಾಗಿತ್ತು. ಈಗ ಅದರ ಮುಂದುವರಿದ ರೋಚಕ ಕಥೆ ಹಾಗೂ ದೈವಿಕ ಹಸ್ತಕ್ಷೇಪದ ಎಲಿಮೆಂಟ್‌ಗಳು ಸಿನಿಮಾದಲ್ಲಿ ಹೈಲೈಟ್ ಆಗಲಿವೆ.

ರಿಷಬ್ ಶೆಟ್ಟಿ ಮುಂದಿನ ಪ್ಯಾನ್-ಇಂಡಿಯಾ ಸಿನಿಮಾಗಳು

ನಟನೆಯಲ್ಲೂ ಬ್ಯುಸಿಯಾಗಿರುವ ರಿಷಬ್ ಶೆಟ್ಟಿ ಕೈಯಲ್ಲಿ ಸದ್ಯ ಎರಡು ದೈತ್ಯ ಪ್ಯಾನ್-ಇಂಡಿಯಾ ಚಿತ್ರಗಳಿವೆ. ಮಲ್ಟಿಟಾಸ್ಕ್ ಮಾಡಲು ಇಷ್ಟಪಡದ ಅವರು, ಒಟ್ಟಿಗೆ ಎರಡು ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ, ಮೊದಲು ಪ್ರಶಾಂತ್ ವರ್ಮ ನಿರ್ದೇಶನದ ‘ಜೈ ಹನುಮಾನ್’ ಚಿತ್ರೀಕರಣ ಮುಗಿಸಿ, ಆ ನಂತರವಷ್ಟೇ ‘ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್’ ಐತಿಹಾಸಿಕ ಸಿನಿಮಾಗೆ ಸಜ್ಜಾಗಲಿದ್ದಾರೆ. ಈ ಎರಡೂ ಪಾತ್ರಗಳಿಗೆ ಸಂಪೂರ್ಣ ಭಿನ್ನವಾದ ತಯಾರಿ ಮತ್ತು ಲುಕ್ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !