July 8, 2026
Wednesday, July 8, 2026
spot_img

ಇಂದು ರಾತ್ರಿ ಇರಾನ್ ಮೇಲೆ ಭಯಾನಕ ದಾಳಿ: ಮುನ್ಸೂಚನೆ ನೀಡಿದ ಅಮೆರಿಕ‌ ಅಧ್ಯಕ್ಷ ಟ್ರಂಪ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಅಮೆರಿಕದ ಮಿಲಿಟರಿ ನೆಲೆಗಳ ಮೇಲಿನ ದಾಳಿಯ ನಂತರ, ಇರಾನ್ ಜತೆಗಿನ ಕದನ ವಿರಾಮ ಒಪ್ಪಂದ ಮುಕ್ತಾಯಗೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಅಷ್ಟೇ ಅಲ್ಲದೆ, ಇಂದು ರಾತ್ರಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

“ಅವರು ಹುಚ್ಚರಂತೆ ಆಡುತ್ತಿದ್ದಾರೆ”:

ಟರ್ಕಿಯ ನ್ಯಾಟೋ (NATO) ಶೃಂಗಸಭೆಯಲ್ಲಿ ಮಾತನಾಡಿದ ಟ್ರಂಪ್, ಇರಾನ್ ನಾಯಕರು ಸಭೆಯಲ್ಲಿ ಎಲ್ಲದಕ್ಕೂ ಒಪ್ಪಿಕೊಂಡು, ಹೊರಗೆ ಹೋಗಿ ಸುಳ್ಳು ಹೇಳುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. “ಅವರು ಮಧ್ಯಪ್ರಾಚ್ಯದ ರೌಡಿಗಳಾಗಿದ್ದರು, ಆದರೆ ಇನ್ನು ಮುಂದೆ ಅದು ನಡೆಯಲ್ಲ. ಅವರು ಪರಮಾಣು ಅಸ್ತ್ರ ಹೊಂದುವಂತಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

‌ಇಂದು ರಾತ್ರಿ ಅವರ ಇನ್ನಷ್ಟು ಬೋಟ್‌ಗಳನ್ನು ಧ್ವಂಸಗೊಳಿಸುತ್ತೇವೆ

ಮುಂದುವರಿದು ಮಾತನಾಡಿದ ಅವರು, ಅಮೆರಿಕವು “ಇಂದು ರಾತ್ರಿ ಇರಾನ್‌ನ ಇನ್ನಷ್ಟು ಬೋಟ್‌ಗಳನ್ನು ಧ್ವಂಸಗೊಳಿಸಬಹುದು” ಹಾಗೂ ಅವರ ವಿದ್ಯುತ್ ಮತ್ತು ನೀರು ಸರಬರಾಜನ್ನು ಕಡಿತಗೊಳಿಸಬಹುದು ಎಂದರು. ಆದರೆ, ತಮಗೆ ಆ ರೀತಿ ಮಾಡಲು ಇಷ್ಟವಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.

ಮಿಲಿಟರಿ ಕ್ರಮ:

ಇರಾನ್‌ನ ಬಂದರು ನಗರಗಳು ಮತ್ತು ದ್ವೀಪಗಳ ಮೇಲೆ ಅಮೆರಿಕ ಈಗಾಗಲೇ ಭೀಕರ ದಾಳಿ ನಡೆಸಿದೆ. ಇರಾನ್‌ನ ಇನ್ನಷ್ಟು ಬೋಟ್‌ಗಳನ್ನು ಧ್ವಂಸಗೊಳಿಸುವ ಮತ್ತು ಖಾರ್ಗ್ ದ್ವೀಪವನ್ನು ವಶಪಡಿಸಿಕೊಳ್ಳುವ ಸಾಮರ್ಥ್ಯ ಅಮೆರಿಕಕ್ಕಿದೆ ಎಂದು ಟ್ರಂಪ್ ಹೇಳಿದ್ದಾರೆ. ಅಮೆರಿಕ ವಿಧಿಸಿರುವ ನೌಕಾ ದಿಗ್ಬಂಧನ ಕೇವಲ ಇರಾನ್‌ಗೆ ಮಾತ್ರ ಅನ್ವಯಿಸಲಿದೆ.

ಇದನ್ನೂ ಓದಿ:

ತಾರಕಕ್ಕೇರಿದ ಸಂಘರ್ಷ:

ಅಮೆರಿಕವು ಇರಾನ್‌ನ ತೈಲ ಮಾರಾಟ ಪರವಾನಗಿಯನ್ನು ರದ್ದುಗೊಳಿಸಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ಬಹ್ರೇನ್ ಮತ್ತು ಕುವೈತ್ ಮೇಲೆ ದಾಳಿ ನಡೆಸಿದ್ದು, ಮಧ್ಯಪ್ರಾಚ್ಯದಲ್ಲಿ ಮತ್ತೊಮ್ಮೆ ದೊಡ್ಡ ಯುದ್ಧದ ಭೀತಿ ಎದುರಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !