July 8, 2026
Wednesday, July 8, 2026
spot_img

ಜಾಗತಿಕ ಮಟ್ಟದಲ್ಲಿ ತಲ್ಲಣ: ಅಮೆರಿಕ-ಇರಾನ್ ಮಧ್ಯಂತರ ಕದನ ವಿರಾಮ ಅಧಿಕೃತವಾಗಿ ರದ್ದು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಏಷ್ಯಾದಲ್ಲಿ ರಣಕಹಳೆ ಮೊಳಗಿದ್ದು, ಜಾಗತಿಕ ಮಟ್ಟದಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ. ಭೀಕರ ರಾಕೆಟ್ ಮತ್ತು ಕ್ಷಿಪಣಿ ದಾಳಿಗಳ ನಡುವೆಯೇ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಜೊತೆಗಿನ ಮಧ್ಯಂತರ ಕದನ ವಿರಾಮವನ್ನು ಅಧಿಕೃತವಾಗಿ ‘ಅಂತ್ಯಗೊಳಿಸಲಾಗಿದೆ’ ಎಂದು ಪ್ರಕಟಿಸಿದ್ದಾರೆ.

ಹಾರ್ಮುಜ್ ಜಲಸಂಧಿ ದಾಳಿ ಮತ್ತು ಟ್ರಂಪ್ ಆಕ್ರೋಶ

ಇತ್ತೀಚೆಗೆ ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಪಡೆಗಳು ಮೂರು ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ ಟ್ರಂಪ್ ಈ ಕಠಿಣ ನಿರ್ಧಾರ ಕೈಗೊಂಡಿದ್ದಾರೆ. ಟರ್ಕಿಯ ಅಂಕಾರಾದಲ್ಲಿ ನಡೆಯುತ್ತಿರುವ ನ್ಯಾಟೋ ಶೃಂಗಸಭೆಯಲ್ಲಿ ಮಾತನಾಡಿದ ಅವರು, “ಇರಾನ್ ಜೊತೆಗಿನ ಒಪ್ಪಂದ ಮುಗಿದ ಅಧ್ಯಾಯ. ವಿಕೃತ ಮನಸ್ಥಿತಿಯ ನಾಯಕರೊಂದಿಗೆ ಮಾತುಕತೆ ನಡೆಸುವುದು ಕೇವಲ ಸಮಯ ವ್ಯರ್ಥ,” ಎಂದು ಗುಡುಗಿದ್ದಾರೆ.

ಮಾತುಕತೆಗೆ ಮುಕ್ತ ಅವಕಾಶ, ಆದರೆ…

ಇರಾನ್ ಸರ್ಕಾರ ತನ್ನದೇ ದೇಶದ 54,000 ಪ್ರತಿಭಟನಾಕಾರರನ್ನು ಕೊಂದಿದೆ ಎಂದು ಗಂಭೀರ ಆರೋಪ ಮಾಡಿದ ಟ್ರಂಪ್, ಆ ದೇಶದ ಆಡಳಿತವನ್ನು ತೀವ್ರವಾಗಿ ಖಂಡಿಸಿದರು. ಆದಾಗ್ಯೂ, ಅಮೆರಿಕದ ಸಂಧಾನಕಾರರ ತಂಡಕ್ಕೆ ಮಾತುಕತೆ ಮುಂದುವರಿಸಲು ಅನುಮತಿ ನೀಡುವುದಾಗಿ ತಿಳಿಸಿರುವ ಅವರು, ಅಂತಿಮ ತೀರ್ಮಾನಕ್ಕೆ ತಮ್ಮ ಬಳಿಯೇ ಬರಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಬೆಳವಣಿಗೆಯಿಂದಾಗಿ ಪಶ್ಚಿಮ ಏಷ್ಯಾದಲ್ಲಿ ಮತ್ತೆ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮುನ್ಸೂಚನೆ ಸಿಕ್ಕಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !