July 9, 2026
Thursday, July 9, 2026
spot_img

ಭಾರತಕ್ಕೆ ‘ಡೂ ಆರ್ ಡೈ’ ಪಂದ್ಯ: ಟಾಸ್ ಗೆದ್ದ ಟೀಮ್ ಇಂಡಿಯಾ ಬ್ಯಾಟಿಂಗ್ ಆಯ್ಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐದು ಪಂದ್ಯಗಳ ಟಿ20 ಸರಣಿಯಲ್ಲಿ ಈಗಾಗಲೇ 0-2 ರಿಂದ ಹಿನ್ನಡೆಯಲ್ಲಿರುವ ಭಾರತ ತಂಡಕ್ಕೆ ಇಂದು ಅಳಿವು-ಉಳಿವಿನ ಪಂದ್ಯವಾಗಿದೆ. ಸರಣಿ ಕೈತಪ್ಪದಂತೆ ತಡೆಯಲು ಟೀಮ್ ಇಂಡಿಯಾ ಬ್ರಿಸ್ಟಲ್‌ನಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಮತ್ತೊಂದೆಡೆ, ಬರೋಬ್ಬರಿ 12 ವರ್ಷಗಳ ಬಳಿಕ ಭಾರತದ ವಿರುದ್ಧ ಟಿ20 ಸರಣಿ ಕೈವಶ ಮಾಡಿಕೊಳ್ಳಲು ಆತಿಥೇಯ ಇಂಗ್ಲೆಂಡ್ ತವಕಿಸುತ್ತಿದೆ.

ಟಾಸ್ ಗೆದ್ದ ಅಯ್ಯರ್; ತಂಡದಲ್ಲಿ ಮಹತ್ವದ ಬದಲಾವಣೆ

ಈ ಹೈ-ವೋಲ್ಟೇಜ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತದ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ. ಇಂದಿನ ಪಂದ್ಯಕ್ಕಾಗಿ ಭಾರತ ತಂಡದಲ್ಲಿ ಎರಡು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ವೇಗಿ ಹರ್ಷಿತ್ ರಾಣಾ ಮತ್ತು ಸ್ಪಿನ್ನರ್ ವರುಣ್ ಚಕ್ರವರ್ತಿ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ಇವರ ಬದಲು ವಾಷಿಂಗ್ಟನ್ ಸುಂದರ್ ಹಾಗೂ ಕರ್ನಾಟಕದ ವೇಗಿ ಪ್ರಸಿದ್ಧ್ ಕೃಷ್ಣ ಅಂತಿಮ ಹನ್ನೊಂದರ ಬಳಗ ಸೇರಿಕೊಂಡಿದ್ದಾರೆ. ಇಂಗ್ಲೆಂಡ್ ತಂಡದಲ್ಲೂ ಒಂದು ಬದಲಾವಣೆ ತರಲಾಗಿದೆ.

8 ವರ್ಷಗಳ ಬಳಿಕ ಬ್ರಿಸ್ಟಲ್‌ನಲ್ಲಿ ಫೈಟ್

ಕಳೆದ 2018ರಲ್ಲಿ ಭಾರತ ತಂಡ ಇಲ್ಲಿ ಕೊನೆಯ ಬಾರಿಗೆ ಟಿ20 ಪಂದ್ಯವಾಡಿತ್ತು. ಅಂದು ಇಂಗ್ಲೆಂಡ್ ನೀಡಿದ್ದ 199 ರನ್‌ಗಳ ಬೃಹತ್ ಗುರಿಯನ್ನು ರೋಹಿತ್ ಶರ್ಮಾ ಅವರ ಆಕರ್ಷಕ ಶತಕದ ನೆರವಿನಿಂದ ಭಾರತ ಸುಲಭವಾಗಿ ಚೇಸ್ ಮಾಡಿತ್ತು. ಇಂದೂ ಕೂಡ ಅದೇ ರೀತಿಯ ಪ್ರದರ್ಶನವನ್ನು ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !