ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳು ಚಿತ್ರರಂಗದ ಪ್ರತಿಭಾವಂತ ಸಿನಿಮಾಟೋಗ್ರಾಫರ್ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ ನಿರ್ದೇಶಕ ಸಳಿಯನ್ ಇಂದು ನಿಧನರಾಗಿದ್ದಾರೆ.
ಸಳಿಯನ್ ಅವರು ಕಳೆದ ಕೆಲ ವರ್ಷಗಳಿಂದ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ನಿನ್ನೆ ರಾತ್ರಿ ಸಳಿಯನ್ ಕೊನೆ ಉಸಿರೆಳೆದಿದ್ದಾರೆ. ತಮಿಳು ಚಿತ್ರರಂಗದ ಹಲವು ಗಣ್ಯರು ಸಳಿಯನ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದು, ಇಂದು (ಜುಲೈ 11) ಬೆಳಿಗಿನಿಂದ ಹಲವು ಗಣ್ಯರು ಸಳಿಯನ್ ಅಂತಿಮ ದರುಶನ ಪಡೆಯುತ್ತಿದ್ದಾರೆ.
ಸಳಿಯನ್ ಅವರು 2007 ರಿಂದ ತಮಿಳು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ತಮನ್ನಾ ಭಾಟಿಯಾ ನಟಿಸಿದ್ದ ಭಿನ್ನ ಕತಾವಸ್ತು ಒಳಗೊಂಡಿದ್ದ ‘ಕಲ್ಲೂರಿ’ ಸಿನಿಮಾದ ಮೂಲಕ ಅವರು ಸಿನಿಮಾಟೊಗ್ರಾಫರ್ ಆಗಿ ಚಿತ್ರರಂಗಕ್ಕೆ ಕಾಲಿಟ್ಟರು. ಆ ಬಳಿಕ ಹಲವಾರು ಭಿನ್ನ ರೀತಿಯ ಸಿನಿಮಾಗಳಿಗೆ ಅವರು ಕ್ಯಾಮೆರಾ ಹಿಂದೆ ಕೆಲಸ ಮಾಡಿದ್ದಾರೆ. ಹಲವು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದ ‘ಪರದೇಸಿ’, ‘ತರೈ ತಪ್ಪಾಟಿ’, ‘ಜೋಕರ್’, ‘ಸವಾರಿ’ ಇನ್ನೂ ಹಲವಾರು ಸಿನಿಮಾಗಳಿಗೆ ಅವರು ಸಿನಿಮಾಟೊಗ್ರಾಫರ್ ಆಗಿ ಕೆಲಸ ಮಾಡಿದ್ದಾರೆ.



