August 26, 2026
Wednesday, August 26, 2026
spot_img

ಟೀಮ್ ಇಂಡಿಯಾದಲ್ಲಿ ಕೋಚ್‌ಗಳ ಉಚ್ಛಾಟನೆ? ಸತತ ಸೋಲಿನ ಬೆನ್ನಲ್ಲೇ ಬಿಸಿಸಿಐ ಬಿಗ್ ಆಕ್ಷನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟೀಮ್ ಇಂಡಿಯಾದ ಸತತ ಐದು ಪಂದ್ಯಗಳ ಸೋಲಿನ ಬೆನ್ನಲ್ಲೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಎಚ್ಚೆತ್ತುಕೊಂಡಿದೆ. ತಂಡದ ಕಳಪೆ ಪ್ರದರ್ಶನಕ್ಕೆ ಬ್ರೇಕ್ ಹಾಕಲು ಕೋಚಿಂಗ್ ವಿಭಾಗದಲ್ಲಿ ಪ್ರಮುಖ ಸರ್ಜರಿ ಮಾಡಲು ಬಿಸಿಸಿಐ ಸಜ್ಜಾಗಿದೆ. ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಸಹಾಯಕ ಸಿಬ್ಬಂದಿ ಪೈಕಿ ಕನಿಷ್ಠ ಒಬ್ಬರು ತಮ್ಮ ಸ್ಥಾನ ಕಳೆದುಕೊಳ್ಳುವುದು ಬಹುತೇಕ ಖಚಿತವಾಗಿದೆ.

ಐರ್ಲೆಂಡ್, ಇಂಗ್ಲೆಂಡ್ ಪ್ರವಾಸದ ಮುಖಭಂಗ

ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಎದುರಾದ ಐತಿಹಾಸಿಕ ಪರಾಜಯ ಹಾಗೂ ಇಂಗ್ಲೆಂಡ್ ಪ್ರವಾಸದಲ್ಲಿನ ಬ್ಯಾಕ್-ಟು-ಬ್ಯಾಕ್ ಸೋಲುಗಳು ಮಂಡಳಿಯ ಕೆಣ್ಣಿಗೆ ಕೆಂಪಾಗಿವೆ. ಜುಲೈ 19 ರಂದು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಮುಕ್ತಾಯವಾಗಲಿದ್ದು, ಅದೇ ದಿನ ಬಿಸಿಸಿಐ ಪ್ರದರ್ಶನ ಪರಿಶೀಲನಾ ಸಭೆ ಕರೆಯಲಾಗಿದೆ. ಈ ಮಹತ್ವದ ಸಭೆಯ ನಂತರ ಅಧಿಕೃತ ಪ್ರಕಟಣೆ ಹೊರಬೀಳಲಿದೆ.

ಸಹಾಯಕ ಕೋಚ್‌ಗಳ ಒಳಜಗಳ?

ತಂಡದ ಆಟಗಾರರ ತಾಂತ್ರಿಕ ಹಾಗೂ ತಂತ್ರಗಾರಿಕೆಯ ವಿಷಯಗಳಲ್ಲಿ ಕೋಚಿಂಗ್ ಸಿಬ್ಬಂದಿ ನಡುವೆ ಗಂಭೀರ ಭಿನ್ನಾಭಿಪ್ರಾಯಗಳು ಮೂಡಿರುವುದು ಈ ಮಹತ್ವದ ಬದಲಾವಣೆಗೆ ಮುಖ್ಯ ಕಾರಣ ಎನ್ನಲಾಗಿದೆ.

ಐಪಿಎಲ್‌ನತ್ತ ಸ್ಟಾರ್ ಕೋಚ್ ಮುಖ!

2024ರಲ್ಲಿ ಗೌತಮ್ ಗಂಭೀರ್ ಜೊತೆ ಮೂರು ವರ್ಷಗಳ ಒಪ್ಪಂದ ಮಾಡಿಕೊಂಡಿದ್ದ ಈ ಪ್ರಮುಖ ತರಬೇತುದಾರ, ಈಗಾಗಲೇ ಟೀಮ್ ಇಂಡಿಯಾ ತೊರೆಯಲು ಮನಸ್ಸು ಮಾಡಿದ್ದಾರೆ. ಮೂಲಗಳ ಪ್ರಕಾರ, ಅವರು ಪ್ರಮುಖ ಐಪಿಎಲ್ ಫ್ರಾಂಚೈಸಿಯೊಂದರ ಜೊತೆ ಮಾತುಕತೆ ಮುಗಿಸಿದ್ದು, ಶೀಘ್ರದಲ್ಲೇ ಆ ತಂಡದ ಮುಖ್ಯ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !