ಹೊಸದಿಗಂತ ಡಿಜಿಟಲ್ ಡೆಸ್ಕ್:
ವೆಸ್ಟ್ ಇಂಡೀಸ್‌ನ ಅನುಭವಿ ಆಲ್‌ರೌಂಡರ್ ಜೇಸನ್ ಹೋಲ್ಡರ್ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿರುವುದಾಗಿ ತಂಡದ ಮುಖ್ಯ ಕೋಚ್ ಡ್ಯಾರೆನ್ ಸ್ಯಾಮಿ ತಿಳಿಸಿದ್ದಾರೆ.
2026ರ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ಪರ ಗಮನಾರ್ಹ ಪ್ರದರ್ಶನ ನೀಡಿದ್ದ ಹೋಲ್ಡರ್ ಇನ್ನು ಮುಂದೆ ಟೆಸ್ಟ್ ಹಾಗೂ ಫ್ರಾಂಚೈಸ್ ಕ್ರಿಕೆಟ್‌ಗೆ ಹೆಚ್ಚು ಒತ್ತು ನೀಡಲಿದ್ದಾರೆ ಎಂದು ಅವರು ಹೇಳಿದ್ದಾರೆ.
ODIಗೆ ವಿದಾಯ ಹೇಳಿದ ಹೋಲ್ಡರ್
2027ರ ಏಕದಿನ ವಿಶ್ವಕಪ್ ಯೋಜನೆ ಕುರಿತು ಮಾತನಾಡಿದ ಡ್ಯಾರೆನ್ ಸ್ಯಾಮಿ, ಹೋಲ್ಡರ್ ಈಗ ಏಕದಿನ ಕ್ರಿಕೆಟ್‌ನಿಂದ ಹಿಂದೆ ಸರಿದಿದ್ದು, ಟೆಸ್ಟ್ ಕ್ರಿಕೆಟ್‌ನಲ್ಲಿ ಮಾತ್ರ ಮುಂದುವರಿಯಲಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ ಈ ಬಗ್ಗೆ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಅಥವಾ ಹೋಲ್ಡರ್ ಅಧಿಕೃತ ಘೋಷಣೆ ಮಾಡಿಲ್ಲ.
10 ವರ್ಷದ ಯಶಸ್ವಿ ಪಯಣ
2013ರಿಂದ 2023ರವರೆಗೆ ಹೋಲ್ಡರ್ 138 ಏಕದಿನ ಪಂದ್ಯಗಳಲ್ಲಿ 2,237 ರನ್ ಹಾಗೂ 159 ವಿಕೆಟ್‌ಗಳನ್ನು ಪಡೆದು ತಂಡದ ಪ್ರಮುಖ ಆಲ್‌ರೌಂಡರ್ ಆಗಿ ಗುರುತಿಸಿಕೊಂಡಿದ್ದರು. ಬ್ಯಾಟಿಂಗ್‌ನಲ್ಲಿ 11 ಅರ್ಧಶತಕಗಳ ಜೊತೆಗೆ ಬೌಲಿಂಗ್‌ನಲ್ಲೂ ಹಲವು ಗೆಲುವುಗಳಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಇದನ್ನೂ ಓದಿ:
ನಾಯಕತ್ವದಲ್ಲೂ ಮಿಂಚಿದ ಆಟಗಾರ
ಹೋಲ್ಡರ್ ವೆಸ್ಟ್ ಇಂಡೀಸ್ ತಂಡವನ್ನು 86 ಏಕದಿನ ಪಂದ್ಯಗಳಲ್ಲಿ ಮುನ್ನಡೆಸಿದ್ದು, ತಮ್ಮ ಶಾಂತ ನಾಯಕತ್ವ ಮತ್ತು ಆಲ್‌ರೌಂಡ್ ಪ್ರದರ್ಶನದಿಂದ ತಂಡದ ವಿಶ್ವಾಸಾರ್ಹ ಆಟಗಾರರಾಗಿದ್ದರು.
ಟೆಸ್ಟ್‌ಗೆ ಮಾತ್ರ ಗಮನ
ಸ್ಯಾಮಿ ಹೇಳುವಂತೆ, ಹೋಲ್ಡರ್ ಟೆಸ್ಟ್ ಕ್ರಿಕೆಟ್ ಜೊತೆಗೆ ವಿಶ್ವದ ವಿವಿಧ ಫ್ರಾಂಚೈಸ್ ಲೀಗ್‌ಗಳಲ್ಲಿ ಆಟ ಮುಂದುವರಿಸಲಿದ್ದು, ಏಕದಿನ ಕ್ರಿಕೆಟ್‌ನಲ್ಲಿ ಅವರ ಅಧ್ಯಾಯ ಬಹುತೇಕ ಅಂತ್ಯಗೊಂಡಂತಾಗಿದೆ.



