July 12, 2026
Sunday, July 12, 2026
spot_img

Quick Recipe | ಕ್ರಿಸ್ಪಿ, ಚೀಸಿ ಗಾರ್ಲಿಕ್ ಸ್ಟಿಕ್ಸ್ ಮಾಡುವ ಸಿಂಪಲ್ ವಿಧಾನ ಇಲ್ಲಿದೆ ನೋಡಿ

ಸಂಜೆಯ ಟೀ-ಟೈಮ್‌ಗೆ ಅಥವಾ ಪಾರ್ಟಿ ಸ್ನ್ಯಾಕ್‌ಗಾಗಿ ರುಚಿಕರವಾದ ಚೀಸ್ ಗಾರ್ಲಿಕ್ ಸ್ಟಿಕ್ಸ್ ಅತ್ಯುತ್ತಮ ಆಯ್ಕೆ. ಕಡಿಮೆ ಸಮಯದಲ್ಲಿ, ಸರಳ ಸಾಮಗ್ರಿಗಳಿಂದ ಈ ಕ್ರಿಸ್ಪಿ ಮತ್ತು ಚೀಸಿ ಸ್ನ್ಯಾಕ್ ಅನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು.

ಬೇಕಾಗುವ ಸಾಮಗ್ರಿಗಳು

ಮೈದಾ – 2 ಕಪ್
ಇನ್‌ಸ್ಟಂಟ್ ಯೀಸ್ಟ್ – 1½ ಟೀಸ್ಪೂನ್
ಸಕ್ಕರೆ – 1 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – 1 ಟೇಬಲ್‌ಸ್ಪೂನ್
ಬೆಣ್ಣೆ – 4 ಟೇಬಲ್‌ಸ್ಪೂನ್
ಬೆಳ್ಳುಳ್ಳಿ – 1½ ಟೇಬಲ್‌ಸ್ಪೂನ್
ಮೊಝರೆಲ್ಲಾ ಚೀಸ್ – 2 ಕಪ್
ಒರೆಗಾನೊ ಅಥವಾ ಇಟಾಲಿಯನ್ ಸೀಸನಿಂಗ್ – 1 ಟೀಸ್ಪೂನ್
ಉಗುರು ಬೆಚ್ಚಗಿನ ನೀರು – ಅಗತ್ಯಕ್ಕೆ

ಮಾಡುವ ವಿಧಾನ

ಉಗುರು ಬೆಚ್ಚಗಿನ ನೀರಿಗೆ ಯೀಸ್ಟ್ ಮತ್ತು ಸಕ್ಕರೆ ಸೇರಿಸಿ 5 ನಿಮಿಷ ಬಿಡಿ. ಬಳಿಕ ಮೈದಾ, ಉಪ್ಪು ಹಾಗೂ ಎಣ್ಣೆ ಸೇರಿಸಿ ಮೃದುವಾದ ಹಿಟ್ಟನ್ನು ಕಲಸಿ. ಒಂದು ಗಂಟೆ ಮುಚ್ಚಿಟ್ಟು ಉಬ್ಬಲು ಬಿಡಿ.

ಕರಗಿದ ಬೆಣ್ಣೆಗೆ ತುರಿದ ಬೆಳ್ಳುಳ್ಳಿ ಮತ್ತು ಒರೆಗಾನೊ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

ಹಿಟ್ಟನ್ನು ದಪ್ಪವಾಗಿ ಲಟ್ಟಿಸಿ. ಅದರ ಮೇಲೆ ಗಾರ್ಲಿಕ್ ಬಟರ್ ಸವರಿ, ಸಾಕಷ್ಟು ಮೊಝರೆಲ್ಲಾ ಚೀಸ್ ಹರಡಿ. ನಂತರ ಉದ್ದನೆಯ ಸ್ಟಿಕ್‌ಗಳಂತೆ ಕತ್ತರಿಸಿ.

ಮೊದಲೇ ಬಿಸಿ ಮಾಡಿದ ಓವನ್‌ನಲ್ಲಿ 180°C ಉಷ್ಣಾಂಶದಲ್ಲಿ 10–12 ನಿಮಿಷ ಬೇಯಿಸಿ. ಚೀಸ್ ಕರಗಿ ಮೇಲ್ಭಾಗ ಬಂಗಾರದ ಬಣ್ಣ ಬಂದ ಕೂಡಲೇ ಹೊರತೆಗೆದು ಟೊಮ್ಯಾಟೊ ಸಾಸ್ ಅಥವಾ ಡಿಪ್ ಜೊತೆ ಬಿಸಿ ಬಿಸಿಯಾಗಿ ಸವಿಯಿರಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !