September 27, 2026
Sunday, September 27, 2026
spot_img

ಚಿಂತೆ ಬಿಡಿ ತಿಂಡಿ ಮಾಡಿ 26 | ಇಂದು ಯಾವ ಸ್ಪೆಷಲ್‌ ತಿಂಡಿ ಇಲ್ಲ, ನಿಮ್ಮದೇ ಅವಲಕ್ಕಿಗೆ ಸ್ಪೆಷಲ್‌ ಟ್ವಿಸ್ಟ್‌ ಅಷ್ಟೇ!

ಸಾಮಾಗ್ರಿಗಳು
ಈರುಳ್ಳಿ
ಹಸಿಮೆಣಸು
ಟೊಮ್ಯಾಟೊ
ಕ್ಯಾರೆಟ್‌
ಬೀನ್ಸ್
ಬಟಾಣಿ
ಆಲೂಗಡ್ಡೆ
ಅವಲಕ್ಕಿ
ಉಪ್ಪು
ಖಾರದಪುಡಿ
ಸಾಂಬಾರ್ ಪುಡಿ
ಬೆಳ್ಳುಳ್ಳಿ
ಕರಿಬೇವು
ಕಡ್ಲೆಬೇಳೆ
ಶೇಂಗಾ
ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ, ಸಾಸಿವೆ, ಕಡ್ಲೆಬೇಳೆ, ಶೇಂಗಾ, ಕರಿಬೇವು, ಬೆಳ್ಳುಳ್ಳಿ ಹಾಕಿ ಬಾಡಿಸಿ
ಆನಂತರ ಹಸಿಮೆಣಸು, ಈರುಳ್ಳಿ ಹಾಕಿ ಬಾಡಿಸಿ, ಇದು ಬೆಂದ ನಂತರ ಟೊಮ್ಯಾಟೊ ಹಾಕಿ ಬಾಡಿಸಿ
ಕಡೆಗೆ ಎಲ್ಲ ತರಕಾರಿಗಳನ್ನು ಹಾಕಿ ಬಾಡಿಸಿ. ತರಕಾರಿ ಬೆಂದ ನಂತರ ಉಪ್ಪು ಹಾಕಿ, ನಂತರ ಸ್ವಲ್ಪ ಖಾರದಪುಡಿ, ಸಾಂಬಾರ್‌ ಪುಡಿ ಹಾಕಿ
ಆಮೇಲೆ ಕೊತ್ತಂಬರಿ ಸೊಪ್ಪು ಹಾಕಿದ್ರೆ ಗೊಜ್ಜು ರೆಡಿ. ಆಮೇಲೆ ನೆನೆಸಿದ ಅವಲಕ್ಕಿ ಹಾಕಿ ಮಿಕ್ಸ್‌ ಮಾಡಿದ್ರೆ ಅವಲಕ್ಕಿ ರೆಡಿ

Must Read