ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಲಿಸುತ್ತಿದ್ದ ರೈಲಿನಲ್ಲಿ ಪೂಜೆ ಮಾಡಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಬೋಗಿಯಲ್ಲಿ ಪೂಜೆ ಮಾಡೋಕೂ ಅವಕಾಶ ಕೊಟ್ರೆ ಹೇಗೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ರು. ಈ ಹಿನ್ನೆಲೆ ಭಾರತೀಯ ರೈಲ್ವೆ ಸ್ಪಷ್ಟನೆ ನೀಡಿದೆ.
ಮೂರು ಲಕ್ಷ ರೂಪಾಯಿಗೂ ಹೆಚ್ಚಿನ ಹಣ ನೀಡಿ ಖಾಸಗಿ ಕೋಚ್‌ನ್ನು ಬುಕ್ ಮಾಡಿಕೊಂಡು ಪೂಜೆ ಮಾಡಿಸಿದ್ದಾರೆ. ಇದು ಕಾನೂನುಬದ್ಧ ಎಂದು ಹೇಳಿದ್ದಾರೆ.
ಈ ಕುರಿತು ಭಾರತೀಯ ರೈಲ್ವೆ ಉತ್ತರ ವಿಭಾಗ ಮಾಹಿತಿ ಹಂಚಿಕೊಂಡಿದೆ. ಪೂಜೆ ನಡೆದಿರುವುದು ರೈಲಿನ ಸಾಮಾನ್ಯ ಬೋಗಿಯಲ್ಲಲ್ಲ. ಬದಲಿಗೆ ವ್ಯಕ್ತಿಯೊಬ್ಬರು 3 ಲಕ್ಷ ರೂ.ಗೂ ಅಧಿಕ ಹಣ ನೀಡಿ ಐಆರ್‌ಸಿಟಿಸಿ ವೆಬ್‌ಸೈಟ್‌ನ ವಾಣಿಜ್ಯ ಬುಕ್ಕಿಂಗ್ ವ್ಯವಸ್ಥೆಯ ಮೂಲಕ ಐಷಾರಾಮಿ ಕೋಚ್‌ನ್ನು ಬುಕ್ ಮಾಡಿದ್ದರು. ಅದರಂತೆ ಆ ಬೋಗಿಯನ್ನು ರೈಲಿಗೆ ಜೋಡಿಸಿದ್ದರು. ಹಾಗಾಗಿ ಆ ಬೋಗಿಯಲ್ಲಿ ಕಾರ್ಯಕ್ರಮ ನಡೆಸಿರುವುದು ಕಾನೂನುಬದ್ಧ ಎಂದು ತಿಳಿಸಿದೆ.



