July 13, 2026
Monday, July 13, 2026
spot_img

ಇಂಥ ಗಂಡನನ್ನು ಪಡೆದ ಪತ್ನಿಯೇ ಭಾಗ್ಯವಂತೆ, ಆಟೋದಲ್ಲಿ ಮನದೆನ್ನೆಯ ಫೋಟೊಗೆ ನಿತ್ಯವೂ ಪೂಜೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಆಟೋ ಚಾಲಕನೊಬ್ಬ ಎಂಟು ವರ್ಷಗಳ ಹಿಂದೆ ಕಳೆದುಕೊಂಡ ತನ್ನ ಪ್ರೀತಿಯ ಮಡದಿಯ ಫೋಟೊವನ್ನು ಪೂಜಿಸುವ ದೃಶ್ಯ ನೋಡಿದ್ರೆ ಎಂಥವರಿಗೇ ಆಗಲಿ ಸಿಕ್ಕರೆ ಇಂತಹ ಗಂಡ ಸಿಗಬೇಕು ಎನಿಸುತ್ತದೆ.

ಬೆಂಗಳೂರಿನ ಆಟೋ ಚಾಲಕರೊಬ್ಬರು ತೀರಿಕೊಂಡ ಪತ್ನಿಯ ಫೋಟೊಗೆ ದಿನವೂ ಕುಂಕುಮ ಇಟ್ಟು, ಹೂವು ಮುಡಿಸಿ ಪೂಜಿಸುವ ವಿಡಿಯೋ ವೈರಲ್‌ ಆಗಿದೆ. ಆಶಿಶ್‌ ಎನ್ನುವವರು ಆಟೋ ಚಾಲಕರನ್ನು ಮಾತನಾಡಿಸಿ ಯಾಕೆ ಹೀಗೆ ಎಂದು ಪ್ರಶ್ನಿಸಿದ್ದಾರೆ.

https://www.instagram.com/reels/DaLTCOuJaWn

ಆಗ ಆಟೋ ಚಾಲಕ ಮಾತನಾಡಿದ್ದು, ನನ್ನ ಪತ್ನಿ ಇಲ್ಲ ಅವಳು ತೀರಿಕೊಂಡಳು. ನನಗೆ ಮಗ ಸೊಸೆ ಮೊಮ್ಮಕ್ಕಳು ಎಲ್ಲರೂ ಇದ್ದಾರೆ. ಆದರೆ ಹೆಂಡತಿ ಹೆಂಡತಿಯೇ ಅಲ್ವಾ? ನನ್ನ ಮಗನಿಗೆ ನಾನು ಆಟೋ ಓಡಿಸೋದು ಇಷ್ಟವಿಲ್ಲ. ಆದರೆ ಮನೆಯಲ್ಲಿದ್ರೆ ಟೆನ್ಶನ್‌ ಹೊರಗಡೆ ಬಂದ್ರೆ ಹೊ ಜನ ಸಿಗ್ತಾರೆ ಮಾತನಾಡ್ತಾ ಮೈಂಡ್‌ ಫ್ರೀ ಮಾಡ್ಕೊಬೋದು ಎಂದಿದ್ದಾರೆ.

ಈ ವಿಡಿಯೋ 2.7 ಮಿಲಿಯನ್ ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಜನ ಈ ಪ್ರೀತಿಗೆ ಖುಷಿ ನೀಡಿದ್ದು, ಉತ್ತಮ ಕಮೆಂಟ್‌ಗಳನ್ನು ಹಾಕಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !