ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಾಲೆಯಲ್ಲಿ ಕನ್ನಡ ಮಾತನಾಡಿದ್ದಕ್ಕೆ ಶಿಕ್ಷಕಿಯೊಬ್ಬರು ಗರಂ ಆಗಿದ್ದು, ನಮ್ಮ ಭಾಷೆ ಮಾತನಾಡಿದ ವಿದ್ಯಾರ್ಥಿನಿಗೆ ಶಿಕ್ಷೆ ಕೊಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕೆಂಗೇರಿಯ ಖಾಸಗಿ ಶಾಲೆಯಲ್ಲಿ ವಿದ್ಯಾರ್ಥಿಯೊಬ್ಬ ಇಂಗ್ಲಿಷ್ ಬಿಟ್ಟು ಕನ್ನಡದಲ್ಲಿ ಮಾತನಾಡಿದ್ದಾರೆ. ಇಷ್ಟಕ್ಕೇ ಗರಂ ಆದ ಶಿಕ್ಷಕಿ ವಿದ್ಯಾರ್ಥಿಗೆ ನಾನು ಇನ್ಮುಂದೆ ಕನ್ನಡ ಮಾತಾಡೋದಿಲ್ಲ ಎಂದು ಪುಸ್ತಕದ ತುಂಬಾ ಇಂಗ್ಲಿಷ್ನಲ್ಲಿ ಬರೆಯಬೇಕು ಎನ್ನುವ ಶಿಕ್ಷೆ ನೀಡಿದ್ದಾರೆ. ಪ್ರತಿ ಬಾರಿಯೂ ನಾನು ಕನ್ನಡ ಮಾತನಾಡೋದಿಲ್ಲ ಎಂದು ಬರೆಯುವಾಗ ಮಗುವಿಗೆ ಕನ್ನಡ ಭಾಷೆ ಬಗ್ಗೆ ತಾತ್ಸಾರ ಬರುವುದಿಲ್ಲವೇ? ನಮ್ಮ ಭಾಷೆ, ನಮ್ಮ ಊರು ಆದರೆ ಶಾಲೆಗಳದ್ದು ಮಾತ್ರ ಅವರದೇ ರೂಲ್ಸ್ ಆಗಿದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕ ವಯಸ್ಸಿನಲ್ಲಿ ಕನ್ನಡ ಮಾತಾಡಿದ್ದಕ್ಕೆ ಈ ತರ ಮಕ್ಕಳಿಗೆ ಶಿಕ್ಷೆ ಕೊಟ್ಟರೆ ಹೇಗೆ? ಇದ್ರಿಂದ ಕನ್ನಡದ ಬಗ್ಗೆ ಮಕ್ಕಳಿಗೆ ಕೀಳರಿಮೆ ಬರೋ ಸಾಧ್ಯತೆ ಹೆಚ್ಚಾಗಿರುತ್ತೆ ಅಂತ ಪೋಷಕರು ಹಾಗೂ ಸಾರ್ವಜನಿಕರು ಆರೋಪ ಮಾಡಿದ್ದು, ಶಿಕ್ಷೆಯನ್ನು ವಾಪಾಸ್ ಪಡೆಯಬೇಕು ಎಂದಿದ್ದಾರೆ.



