July 13, 2026
Monday, July 13, 2026
spot_img

IND vs ENG ODI: ನಾಳೆಯಿಂದ ಭಾರತ-ಇಂಗ್ಲೆಂಡ್ ಹೈವೋಲ್ಟೇಜ್ ಫೈಟ್: ಕೊಹ್ಲಿ-ರೋಹಿತ್ ರಿ-ಎಂಟ್ರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಮತ್ತು ಇಂಗ್ಲೆಂಡ್ ನಡುವಿನ ಹೈ-ವೋಲ್ಟೇಜ್ ಏಕದಿನ ಕ್ರಿಕೆಟ್ ಸರಣಿ ನಾಳೆಯಿಂದ (ಜುಲೈ 14) ಆರಂಭವಾಗಲಿದ್ದು, ಬರ್ಮಿಂಗ್​ಹ್ಯಾಮ್​ನ ಪ್ರಸಿದ್ಧ ಎಡ್ಜ್​ಬಾಸ್ಟನ್ ಮೈದಾನದಲ್ಲಿ ಮೊದಲ ಪಂದ್ಯ ನಡೆಯಲಿದೆ. ಈ ಪ್ರತಿಷ್ಠಿತ ಸರಣಿಗಾಗಿ ಟೀಮ್ ಇಂಡಿಯಾ ಪೂರ್ಣ ಬಲದೊಂದಿಗೆ ಸಜ್ಜಾಗಿದ್ದು, ಸ್ಟಾರ್ ಆಟಗಾರರ ಪುನರಾಗಮನವು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

ಹಿರಿಯ ಆಟಗಾರರ ಗ್ರ್ಯಾಂಡ್ ಎಂಟ್ರಿ

ಟಿ20 ವಿಶ್ವಕಪ್ ಬಳಿಕ ವಿಶ್ರಾಂತಿಯಲ್ಲಿದ್ದ ನಾಯಕ ರೋಹಿತ್ ಶರ್ಮಾ, ರನ್ ಮಷಿನ್ ವಿರಾಟ್ ಕೊಹ್ಲಿ ಹಾಗೂ ಸ್ಟಾರ್ ವೇಗಿ ಜಸ್​ಪ್ರೀತ್ ಬುಮ್ರಾ ಅವರು ಏಕದಿನ ಸರಣಿಯ ಮೂಲಕ ತಂಡಕ್ಕೆ ಮರಳುತ್ತಿದ್ದಾರೆ. ಈ ಹಿರಿಯ ಆಟಗಾರರ ಎಂಟ್ರಿಯಿಂದಾಗಿ ಭಾರತ ತಂಡವು ಇಂಗ್ಲೆಂಡ್ ವಿರುದ್ಧ ಬಲಿಷ್ಠ ಪಡೆಯನ್ನು ಕಣಕ್ಕಿಳಿಸುತ್ತಿದೆ.

ಬಲಿಷ್ಠ ಬ್ಯಾಟಿಂಗ್ ಲೈನಪ್

ಮೊದಲ ಏಕದಿನ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಜೊತೆಗೆ ಯುವ ಬ್ಯಾಟರ್ ಶುಭ್​ಮನ್ ಗಿಲ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಇನ್ನು ಎಂದಿನಂತೆ ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಕಣಕ್ಕಿಳಿಯಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ನಾಲ್ಕನೇ ಸ್ಥಾನದಲ್ಲಿದ್ದರೆ, ವಿಕೆಟ್ ಕೀಪರ್ ಜವಾಬ್ದಾರಿಯೊಂದಿಗೆ ಕೆಎಲ್ ರಾಹುಲ್ ಐದನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲಿದ್ದಾರೆ. ಬಲಿಷ್ಠ ಬ್ಯಾಟಿಂಗ್ ಹಾಗೂ ಬೌಲಿಂಗ್ ಲೈನಪ್ ಹೊಂದಿರುವ ರೋಹಿತ್ ಪಡೆ ಇಂಗ್ಲೆಂಡ್ ನೆಲದಲ್ಲಿ ಶುಭಾರಂಭ ಮಾಡುವ ಗುರಿ ಹೊಂದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !