September 20, 2026
Sunday, September 20, 2026
spot_img

ಕಾಡುಕೋಣದ ಜೊತೆ ಸೆಲ್ಫಿ ಹುಚ್ಚು! ನಿಯಮ ಮೀರಿ ಹತ್ತಿರ ಹೋದ ಪ್ರವಾಸಿಗನ ಸ್ಥಿತಿ ಏನಾಯ್ತು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕದ ಪ್ರಸಿದ್ಧ ಪ್ರವಾಸಿ ತಾಣವಾದ ವ್ಯೋಮಿಂಗ್‌ನ ಯೆಲ್ಲೋಸ್ಟೋನ್ ನ್ಯಾಷನಲ್ ಪಾರ್ಕ್‌ನಲ್ಲಿ ಮೈ ರೋಮಾಂಚನಗೊಳಿಸುವ ಘಟನೆಯೊಂದು ಸಂಭವಿಸಿದೆ. ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರಿ ಕಾಡುಕೋಣದ ತೀರಾ ಹತ್ತಿರ ತೆರಳಿದ ಪ್ರವಾಸಿಗನೊಬ್ಬನ ಮೇಲೆ ವನ್ಯಜೀವಿ ಭೀಕರವಾಗಿ ದಾಳಿ ನಡೆಸಿದೆ. ಸದ್ಯ ಈ ಆತಂಕಕಾರಿ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

8 ಅಡಿ ಎತ್ತರಕ್ಕೆ ಹಾರಿದ ವ್ಯಕ್ತಿ!

ಸಾಮಾನ್ಯವಾಗಿ ಶಾಂತ ಸ್ವಭಾವದ ಬೈಸನ್‌ಗಳು, ತಮ್ಮ ಪ್ರದೇಶಕ್ಕೆ ಬೇರೆಯವರು ನುಗ್ಗಿದಾಗ ತಕ್ಷಣವೇ ರೊಚ್ಚಿಗೇಳುತ್ತವೆ. ಇಲ್ಲಿಯೂ ಸಹ ಪ್ರವಾಸಿಗ ತೀರಾ ಹತ್ತಿರ ಬಂದಿದ್ದರಿಂದ ಕೋಪಗೊಂಡ ಕಾಡುಕೋಣ, ಆತನನ್ನು ಅಟ್ಟಿಸಿಕೊಂಡು ಹೋಗಿ ತನ್ನ ಬಲಿಷ್ಠ ಕೋಡುಗಳಿಂದ ಬರೋಬ್ಬರಿ 8 ಅಡಿಗೂ ಹೆಚ್ಚು ಎತ್ತರಕ್ಕೆ ಗಾಳಿಯಲ್ಲಿ ತೂರಿ ಎಸೆದಿದೆ. ಪ್ರಾಣಭಯದಿಂದ ಓಡಲು ಯತ್ನಿಸಿದರೂ ಆತ ಜೀವಿ ಭಕ್ಷಕ ದಾಳಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ತೀವ್ರವಾಗಿ ಗಾಯಗೊಂಡಿರುವ ವ್ಯಕ್ತಿಯನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಉದ್ಯಾನವನದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಅಧಿಕಾರಿಗಳಿಂದ ಕಟ್ಟುನಿಟ್ಟಿನ ಎಚ್ಚರಿಕೆ

ಈ ಘಟನೆಯ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ವನ್ಯಜೀವಿ ಇಲಾಖೆಯು ಪ್ರವಾಸಿಗರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ರಾಷ್ಟ್ರೀಯ ಉದ್ಯಾನವನಗಳಿಗೆ ಭೇಟಿ ನೀಡುವ ಸಾರ್ವಜನಿಕರು ಯಾವುದೇ ಕಾರಣಕ್ಕೂ ವನ್ಯಜೀವಿಗಳ ಹತ್ತಿರ ಹೋಗಬಾರದು ಮತ್ತು ಕಡ್ಡಾಯವಾಗಿ ಕನಿಷ್ಠ 75 ಅಡಿ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಆದೇಶಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !