August 31, 2026
Monday, August 31, 2026
spot_img

Snack | ಸಂಜೆಯ ಟೀ ಜೊತೆ ಸೂಪರ್ ಸ್ನ್ಯಾಕ್: 10 ನಿಮಿಷದಲ್ಲಿ ಮಾಡಿ ಕ್ರಿಸ್ಪಿ ಮಸಾಲಾ ಬ್ರೆಡ್

ಸಂಜೆಯ ವೇಳೆ ಬಿಸಿ ಬಿಸಿ ಚಹಾದೊಂದಿಗೆ ಏನಾದರೂ ಖಾರವಾಗಿ ತಿನ್ನಬೇಕು ಅನ್ನಿಸಿದರೆ, ಕ್ರಿಸ್ಪಿ ಮಸಾಲಾ ಬ್ರೆಡ್ ಟ್ರೈ ಮಾಡಿ. ಮನೆಯಲ್ಲೇ ಇರುವ ಕೆಲವೇ ಪದಾರ್ಥಗಳಿಂದ 10 ನಿಮಿಷದಲ್ಲಿ ಈ ರುಚಿಕರ ಸ್ನ್ಯಾಕ್ ತಯಾರಿಸಬಹುದು.

ಬೇಕಾಗುವ ಸಾಮಗ್ರಿಗಳು:

ಬ್ರೆಡ್ ಸ್ಲೈಸ್ – 4 ರಿಂದ 5
ಈರುಳ್ಳಿ – 1 (ಸಣ್ಣಗೆ ಕತ್ತರಿಸಿದ)
ಟೊಮೆಟೊ – 2 (ಸಣ್ಣಗೆ ಕತ್ತರಿಸಿದ)
ಹಸಿಮೆಣಸಿನಕಾಯಿ – 2
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – ½ ಚಮಚ
ಬೆಣ್ಣೆ ಅಥವಾ ಎಣ್ಣೆ – 2 ಚಮಚ
ಪಾವ್ ಭಾಜಿ ಮಸಾಲಾ – 1 ಚಮಚ
ಗರಂ ಮಸಾಲಾ – ½ ಚಮಚ
ಖಾರದ ಪುಡಿ – ½ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು – ಸ್ವಲ್ಪ

ಮಾಡುವ ವಿಧಾನ:

ಮೊದಲು ಬ್ರೆಡ್ ಅನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ಸ್ವಲ್ಪ ಬೆಣ್ಣೆಯಲ್ಲಿ ಗರಿಗರಿಯಾಗುವವರೆಗೆ ಹುರಿದುಕೊಳ್ಳಿ. ನಂತರ ಬಾಣಲೆಯಲ್ಲಿ ಎಣ್ಣೆ ಅಥವಾ ಬೆಣ್ಣೆ ಬಿಸಿ ಮಾಡಿ, ಹಸಿಮೆಣಸಿನಕಾಯಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಗೂ ಈರುಳ್ಳಿ ಹಾಕಿ ಬಾಡಿಸಿ. ಬಳಿಕ ಟೊಮೆಟೊ ಸೇರಿಸಿ ಮೆತ್ತಗಾಗುವವರೆಗೆ ಬೇಯಿಸಿ.

ಈಗ ಖಾರದ ಪುಡಿ, ಗರಂ ಮಸಾಲಾ, ಪಾವ್ ಭಾಜಿ ಮಸಾಲಾ, ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಕೊನೆಯಲ್ಲಿ ಹುರಿದ ಬ್ರೆಡ್ ತುಂಡುಗಳನ್ನು ಸೇರಿಸಿ ಮಸಾಲೆ ಚೆನ್ನಾಗಿ ಅಂಟುವಂತೆ 2 ನಿಮಿಷ ಕಲಸಿ. ಮೇಲೆ ಕೊತ್ತಂಬರಿ ಸೊಪ್ಪು ಉದುರಿಸಿದರೆ ರುಚಿಯಾದ ಕ್ರಿಸ್ಪಿ ಮಸಾಲಾ ಬ್ರೆಡ್ ಸವಿಯಲು ಸಿದ್ಧ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !