September 14, 2026
Monday, September 14, 2026
spot_img

ಬೆಂಗಳೂರಿಗರೇ ಕಸ ನಿಯಮ ಉಲ್ಲಂಘಿಸಿದ್ರೆ ಹುಷಾರ್! 15 ಸಾವಿರ ರೂ. ದಂಡ ಫಿಕ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಸ ವಿಲೇವಾರಿ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ ಕಠಿಣ ಕ್ರಮ ಆರಂಭಿಸಿದೆ. ನಿಯಮ ಪಾಲಿಸದ ಸುಮಾರು 50 ಸಾವಿರ ಬೃಹತ್ ತ್ಯಾಜ್ಯ ಉತ್ಪಾದಕರಿಗೆ ನೋಟಿಸ್ ಜಾರಿಗೊಳಿಸಲಾಗಿದ್ದು, ದಂಡ ವಿಧಿಸುವ ಎಚ್ಚರಿಕೆ ನೀಡಲಾಗಿದೆ.

ನಿಯಮ ಉಲ್ಲಂಘಿಸಿದರೆ ಭಾರೀ ದಂಡ

ಹೋಟೆಲ್, ಮಾಲ್, ಅಪಾರ್ಟ್‌ಮೆಂಟ್, ಐಟಿ ಕಂಪನಿ ಸೇರಿದಂತೆ ಹಲವು ಸಂಸ್ಥೆಗಳಿಗೆ ನೋಟಿಸ್ ನೀಡಲಾಗಿದೆ. ಮೊದಲ ಬಾರಿ ನಿಯಮ ಉಲ್ಲಂಘಿಸಿದರೆ ₹15 ಸಾವಿರ ದಂಡ, ಮತ್ತೆ ಅದೇ ತಪ್ಪು ಮರುಕಳಿಸಿದರೆ ₹30 ಸಾವಿರ ದಂಡ ವಿಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:

7 ದಿನಗಳಲ್ಲಿ ಉತ್ತರ ಕಡ್ಡಾಯ

ನೋಟಿಸ್ ಪಡೆದವರು 7 ದಿನಗಳೊಳಗೆ ತ್ಯಾಜ್ಯವನ್ನು ಹೇಗೆ ವಿಲೇವಾರಿ ಮಾಡುತ್ತಿದ್ದಾರೆ ಎಂಬ ಮಾಹಿತಿ ನೀಡಬೇಕು. ಸ್ಥಳದಲ್ಲೇ ತ್ಯಾಜ್ಯ ಸಂಸ್ಕರಣೆ ಅಥವಾ ಅಧಿಕೃತ ಸಂಸ್ಥೆಗಳ ಮೂಲಕ ವಿಲೇವಾರಿ ಮಾಡದಿದ್ದರೆ, ಕಾನೂನು ಕ್ರಮದ ಜೊತೆಗೆ ದಂಡವೂ ಅನಿವಾರ್ಯ ಎಂದು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ ಎಚ್ಚರಿಕೆ ನೀಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !