ಹೊಸದಿಗಂತ ವರದಿ ಕಾರವಾರ:
ರಾಜ್ಯ ಸರ್ಕಾರ ನೀಡಲು ಮುಂದಾಗಿರುವ ರಾಷ್ಟ್ರೀಯ ಭದ್ರತೆಯ ಆತಂಕಕ್ಕೆ ಕಾರಣವಾಗುವ ಶಾಶ್ವತ ನಿವಾಸಿ ಪ್ರಮಾಣಪತ್ರ (ಪಿಆರ್ಸಿ)ವನ್ನು ಕೂಡಲೇ ತಡೆ ಹಿಡಿಯಲು ರಾಜ್ಯಪಾಲರು ಹಾಗೂ ಕೇಂದ್ರ ಗೃಹ ಇಲಾಖೆ ತಕ್ಷಣ ಮಧ್ಯಪ್ರವೇಶ ಮಾಡಬೇಕೆಂದು ಬಿಜೆಪಿ ಮುಖಂಡರು ಜಿಲ್ಲಾ ಆಡಳಿತದ ಮೂಲಕ ಮನವಿ ನೀಡಿದರು.
ಕರ್ನಾಟಕ ಸರ್ಕಾರವು ಕರ್ನಾಟಕ ಶಾಶ್ವತ ನಿವಾಸ ಪ್ರಮಾಣಪತ್ರ (ಪಿಆರ್ಸಿ), 2026 ಸಂಬಂಧ ಅಧಿಸೂಚನೆಯನ್ನು ಹೊರಡಿಸಿದೆ. ಇದು ಗಂಭೀರ ಸಾಂವಿಧಾನಿಕ, ಕಾನೂನು ಮತ್ತು ರಾಷ್ಟ್ರೀಯ ಭದ್ರತಾ ಆತಂಕಗಳನ್ನು ಹುಟ್ಟುಹಾಕಿದೆ. ಇದರ ಕುರಿತು ಕೇಂದ್ರ ಗೃಹ ಇಲಾಖೆ ಹಾಗೂ ರಾಜ್ಯಪಾಲರು ತಕ್ಷಣವೇ ಮಧ್ಯಪ್ರವೇಶ ಮಾಡಬೇಕು.
ಬಾಂಗ್ಲಾದೇಶಿಯರ ವಾಸ್ತವ್ಯವನ್ನು ಸಕ್ರಮಗೊಳಿಸುವ ಹುನ್ನಾರ ಇದರ ಅಡಿ ಅಡಗಿದ್ದು, ಇದು ಜಾರಿ ಆಗದಂತೆ ಮಧ್ಯಪ್ರವೇಶ ಮಾಡಬೇಕೆಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಅವರಿಗೆ ಮನವಿ ಮಾಡಿದರು.
ಭಾರತೀಯ ಜನತಾ ಪಾರ್ಟಯ ಜಿಲ್ಲಾಧ್ಯಕ್ಷರಾದ ಎನ್ ಎಸ್ ಹೆಗಡೆ, ರಾಷ್ಟ್ರೀಯ ಹಿಂದುಳಿದವರ್ಗದ ಪ್ರಧಾನ ಕಾರ್ಯದರ್ಶಿ ಯಶಪಾಲ್ ಸುವರ್ಣ, ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ರೂಪಾಲಿ ಎಸ್ ನಾಯ್ಕ್, ಕುಮಟಾ ಕ್ಷೇತ್ರದ ಶಾಸಕರಾದ ದಿನಕರ ಶೆಟ್ಟಿ, ಹಳಿಯಾಳ ಮಾಜಿ ಶಾಸಕರಾದ ಸುನೀಲ್ ಹೆಗಡೆ, ಈಶ್ವರ್ ನಾಯ್ಕ ಭಟ್ಕಳ, ಜಿಲ್ಲಾ ಒಬಿಸಿ ಜಿಲ್ಲಾ ಅಧ್ಯಕ್ಷರಾದ ರಾಜೇಂದ್ರ ನಾಯ್ಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ನಾಯ್ಕ, ಶಿವಾಜಿ ನರಸಾನಿ, ಜಿಲ್ಲಾ ಉಪಾಧ್ಯಕ್ಷರಾದ ಸಂಜಯ್ ಸಾಳುಂಕೆ, ಮಂಡಲ ಅಧ್ಯಕ್ಷರಾದ ನಾಗೇಶ್ ಕುರ್ಡೇಕರ್, ಮನೋಜ್ ಭಟ್, ಪಕ್ಷದ ಪ್ರಮುಖರು, ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.



