ಸಾಮಾಗ್ರಿಗಳು
ಗೋಧಿಹಿಟ್ಟು
ಉಪ್ಪು
ನೀರು
ಸಕ್ಕರೆ
ತುಪ್ಪ
ಮಾಡುವ ವಿಧಾನ
ಗೋಧಿಹಿಟ್ಟಿಗೆ ಸ್ವಲ್ಪ ಉಪ್ಪು, ನೀರು ಹಾಕಿ ಕಲಸಿಕೊಳ್ಳಿ, ಬೇಕಿದ್ದಲ್ಲಿ ಸ್ವಲ್ಪ ಎಣ್ಣೆ ಹಾಕಿ ಕಲಸಿಕೊಳ್ಳಿ
ಆನಂತರ ಹಿಟ್ಟನ್ನು ಅರ್ಧ ಗಂಟೆ ರೆಸ್ಟ್ ಮಾಡೋಕೆ ಬಿಡಿ.
ಕಡೆಗೆ ಚಪಾತಿ ಆಕಾರಕ್ಕೆ ಸಣ್ಣದಾಗಿ ಲಟ್ಟಿಸಿ ಮಧ್ಯಕ್ಕೆ ತುಪ್ಪ ಹಾಗೂ ಸಕ್ಕರೆ ಹಾಕಿ
ನಂತರ ಅದನ್ನು ಮತ್ತೆ ಲಟ್ಟಿಸಿ, ಎರಡೂ ಕಡೆ ಚೆನ್ನಾಗಿ ಬೇಯಿಸಿ ಮಕ್ಕಳಿಗೆ ಕೊಡಿ ಇಷ್ಟಪಟ್ಟು ತಿಂತಾರೆ.



