ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಲ್ಟ್ ಕ್ಲಾಸಿಕ್ ಸಿನಿಮಾ ತುಂಬಾಡ್‌ನ ಸೀಕ್ವೆಲ್ ನಿರ್ಮಾಣವಾಗುತ್ತಿದೆ. ಈ ಸಿನಿಮಾಗೆ ಸಮಂತಾ ಲೀಡ್ ಎಂದು ಹೇಳಲಾಗಿತ್ತು. ಆದರೆ ಸಮಂತಾ ಬದಲಿಗೆ ಈ ಚಾನ್ಸ್ ಆಲಿಯಾ ಭಟ್‌ಗೆ ಸಿಕ್ಕಿದೆ.
ಹೌದು, ಚಿತ್ರದ ನಾಯಕ ನಟ ಮತ್ತು ನಿರ್ಮಾಪಕ ಸೋಹಮ್ ಶಾ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ತಂಡಕ್ಕೆ ಆಲಿಯಾ ಭಟ್‌ರನ್ನು ಸ್ವಾಗತಿಸಿದ್ದಾರೆ. ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು, ಒಂದು ಹೊಸ ಅಧ್ಯಾಯ ತೆರೆದುಕೊಳ್ಳುತ್ತಿದೆ. ತುಂಬಾಡ್ 2ಗೆ ಆಲಿಯಾ ಭಟ್ ಬರ್ತಿದ್ದಾರೆ. ಚಿತ್ರಮಂದಿರಗಳಲ್ಲಿ ಈ ಪ್ರಳಯವನ್ನು ಕಣ್ತುಂಬಿಕೊಳ್ಳಿ ಎಂದು ಬರೆದಿದ್ದಾರೆ.
https://www.instagram.com/p/Dawou2Kgu1q/?img_index=1
ತುಂಬಾಡ್ ಸಿನಿಮಾ ರೀ ರಿಲೀಸ್ ಆಗಿ ಸಾಕಷ್ಟು ಹಣ ಮಾಡಿತ್ತು. ಈ ಸಿನಿಮಾದ ಫ್ಯಾನ್ ಆಗಿರುವ ಆಲಿಯಾ ಫಿಲಂ ನನ್ನ ಮನಸ್ಸಿನಲ್ಲೇ ಉಳಿದುಕೊಂಡಿದೆ. ಇಷ್ಟೊಂದು ಅದ್ಭುತ ಪ್ರಪಂಚವನ್ನು ನಿರ್ಮಿಸಿದ್ದಾರೆ. ಎಷ್ಟು ವರ್ಷವಾದ್ರೂ ಜನ ಇದನ್ನು ಮರೆತಿಲ್ಲ. ಕಥೆ ಕೇಳಿದ ನಂತರ ನನಗೆ ರೋಚಕ ಅನುಭವವಾಯ್ತು ಎಂದಿದ್ದಾರೆ.
ಆದೇಶ್ ಪ್ರಸಾದ್ ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ಆಲಿಯಾ ಭಟ್ ಜೊತೆಗೆ ಸೋಹಮ್ ಶಾ ಮತ್ತು ನವಾಜುದ್ದೀನ್ ಸಿದ್ದಿಕಿ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸೋಹಮ್ ಶಾ ಫಿಲ್ಮ್ಸ್ ಮತ್ತು ಪೆನ್ ಸ್ಟುಡಿಯೋಸ್ ನಿರ್ಮಿಸುತ್ತಿರುವ ಈ ಚಿತ್ರವು ಡಿಸೆಂಬರ್ 3, 2027 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.



