August 31, 2026
Monday, August 31, 2026
spot_img

ಆಟವಾಡುತ್ತಾ ಬಟ್ಟೆ ಅಂಗಡಿಯ ಗ್ರಿಲ್‌ನಿಂದ ಆಯತಪ್ಪಿ ಕೆಳಕ್ಕೆ ಬಿದ್ದ ಮಗು: ಸ್ಥಿತಿ ಗಂಭೀರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚಿಕ್ಕಬಳ್ಳಾಪುರದ ಪಿಳ್ಳಪ್ಪ ಕಾಂಪ್ಲೆಕ್ಸ್‌ನಲ್ಲಿ ಬಟ್ಟೆ ಅಂಗಡಿಯ ಹೊರಗೆ ಗ್ರಿಲ್‌ನಲ್ಲಿ ಆಟವಾಡ್ತಿದ್ದ ನಾಲ್ಕು ವರ್ಷದ ಮಗು ಆಯತಪ್ಪಿ ಕೆಳಕ್ಕೆ ಬಿದ್ದಿದೆ.

ಗೊಲ್ಲರದೊಡ್ಡಿ ಗ್ರಾಮದ ನಾರಾಯಣಸ್ವಾಮಿ-ಮಧು ದಂಪತಿಯ ಪುತ್ರಿ ಗಗನ ಸಿಂಧು ಪೋಷಕರ ಜೊತೆ ಬಟ್ಟೆ ತೆಗೆದುಕೊಳ್ಳಲು ಬಟ್ಟೆ ಅಂಗಡಿಗೆ ಬಂದಿದ್ದಳು. ಈ ವೇಳೆ ಅಪ್ಪ ಅಮ್ಮ ಅಂಗಡಿಯ ಒಳಗೆ ಬಟ್ಟೆ ನೋಡ್ತಿದ್ದಂತೆ ಮಗು ಅಂಗಡಿಯ ಹೊರಗೆ ಆಟ ಆಡುತ್ತಿತ್ತು.

ಅಂಗಡಿಯ ಗ್ರಿಲ್ ಮೇಲೆ ಹತ್ತಿ ಆಟವಾಡುತ್ತಿತ್ತು. ಈ ವೇಳೆ ಒಂದೆರಡು ಬಾರಿ ತಾಯಿ ಮಗುವನ್ನು ಒಳಗೆ ಕರೆದುಕೊಂಡು ಹೋಗಿದ್ದರು. ಆದರೂ ಮತ್ತೆ ಗ್ರಿಲ್ ಬಳಿ ಬಂದಿದ್ದ ಬಾಲಕಿ ಆಕಸ್ಮಿಕವಾಗಿ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾಳೆ. ತಕ್ಷಣವೇ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಮಗುವನ್ನು ದಾಖಲಿಸಲಾಗಿದೆ. ಆದರೆ ಮಗುವಿನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಮಗು ಹೊರಗಡೆ ಓಡಿ ಹೋಗ್ತಾ ಇತ್ತು. ಅವರ ತಾಯಿ ಮಗುವನ್ನು ಒಳಕ್ಕೆ ಕರ್ಕೊಂಡು ಬರ್ತಾ ಇದ್ರು. ಇದೇ ಥರ ಮೂರು ನಾಲ್ಕು ಬಾರಿ ಆಯ್ತು. ಆದರೆ ದುರದೃಷ್ಟವಶಾತ್‌ ಐದನೇ ಬಾರಿ ಮಗು ಕೆಳಕ್ಕೆ ಬಿದ್ದಿದೆ ಎಂದು ಅಂಗಡಿ ಮಾಲೀಕರು ಮಾಹಿತಿ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !