September 6, 2026
Sunday, September 6, 2026
spot_img

ಮಹಾರಾಷ್ಟ್ರದಲ್ಲಿ ಬಯಲಾಯ್ತು ನಕಲಿ ಹಾಲಿನ ದಂಧೆ: 2.3 ಕೋಟಿ ಲೀಟರ್ ಕೆಮಿಕಲ್ ಹಾಲು ಸರಬರಾಜು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಾರಾಷ್ಟ್ರದ ಧಾರಾಶಿವ್ ಜಿಲ್ಲೆಯ ಭೂಮ್ ತಾಲೂಕಿನಲ್ಲಿ ಆಹಾರ ಮತ್ತು ಔಷಧ ಆಡಳಿತ ಸಂಸ್ಥೆ ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, ಬೃಹತ್ ಕೃತಕ ಹಾಲಿನ ದಂಧೆಯನ್ನು ಪತ್ತೆಹಚ್ಚಿದ್ದಾರೆ. ಕಳೆದ ಆರು ತಿಂಗಳಲ್ಲಿ ಇಡೀ ರಾಜ್ಯಾದ್ಯಂತ ಬರೋಬ್ಬರಿ 2.3 ಕೋಟಿ ಲೀಟರ್‌ಗೂ ಅಧಿಕ ನಕಲಿ ಹಾಲನ್ನು ಜನರಿಗೆ ಸರಬರಾಜು ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಹಾಲು ದಪ್ಪಗಾಗಿಸಲು ಅಪಾಯಕಾರಿ ಕೆಮಿಕಲ್ ಬಳಕೆ!

ಗ್ರಾಹಕರಿಗೆ ಅಸಲಿ ಹಾಲಿನ ಭ್ರಮೆ ಮೂಡಿಸಲು ಮತ್ತು ಅದರಲ್ಲಿ ಕೊಬ್ಬಿನಾಂಶವನ್ನು (Fat) ಹೆಚ್ಚಿಸಲು ಆರೋಪಿಗಳು ಅತ್ಯಂತ ಹಾನಿಕಾರಕ ವಸ್ತುಗಳನ್ನು ಬಳಸುತ್ತಿದ್ದರು. ಬಟ್ಟೆ ಒಗೆಯುವ ನಿರ್ಮಾ ಡಿಟರ್ಜೆಂಟ್ ಪೌಡರ್, ಪಾಮ್ ಆಯಿಲ್, ಕಳಪೆ ಗುಣಮಟ್ಟದ ರಾಸಾಯನಿಕಗಳು ಹಾಗೂ ಕಡಿಮೆ ದರ್ಜೆಯ ಹಾಲಿನ ಪುಡಿಯನ್ನು ಮಿಶ್ರಣ ಮಾಡಿ ಈ ಕೃತಕ ಹಾಲನ್ನು ಸಿದ್ಧಪಡಿಸಲಾಗುತ್ತಿತ್ತು.

ಕೋಟ್ಯಂತರ ರೂಪಾಯಿ ಮೌಲ್ಯದ ವಹಿವಾಟು

ದಾಳಿಯ ವೇಳೆ ವಶಪಡಿಸಿಕೊಂಡ ದಾಖಲೆಗಳ ಪ್ರಕಾರ, ಆರೋಪಿಗಳು ಕೇವಲ 6 ತಿಂಗಳ ಅವಧಿಯಲ್ಲಿ 2,30,470 ಕೆಜಿಯಷ್ಟು ಕಳಪೆ ಹಾಲಿನ ಪುಡಿಯನ್ನು ಬಳಸಿದ್ದಾರೆ. ಇದರ ಮೂಲಕ ಸುಮಾರು 23,04,070 ಲೀಟರ್ ವಿಷಕಾರಿ ಹಾಲನ್ನು ಸೃಷ್ಟಿಸಿ, ಮಾರುಕಟ್ಟೆಯಲ್ಲಿ ₹9.21 ಕೋಟಿಗಿಂತಲೂ ಅಧಿಕ ಮೊತ್ತಕ್ಕೆ ಮಾರಾಟ ಮಾಡಿ ಸಾರ್ವಜನಿಕರ ಆರೋಗ್ಯದ ಜೊತೆ ಚೆಲ್ಲಾಟ ಆಡಿದ್ದಾರೆ. ಈ ಆಘಾತಕಾರಿ ಪ್ರಕರಣದಿಂದಾಗಿ ಸಾರ್ವಜನಿಕರು ತೀವ್ರ ಆತಂಕಕ್ಕೊಳಗಾಗಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !