ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಆಮಿರ್ ಖಾನ್ ಈವರೆಗೂ ಮೂರು ವಿವಾಹವಾಗಿದ್ದಾರೆ ಎಲ್ಲರೂ ಹಿಂದು ಹೆಣ್ಣುಮಕ್ಕಳೇ. ಲವ್ ಜಿಹಾದ್ನ ಬ್ರಾಂಡ್ ಅಂಬಾಸಿಡರ್ ಎನ್ನುವ ಹಾರ್ಷ್ ಕಮೆಂಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿತ್ತು.
ಇದೀಗ ಈ ಪ್ರಶ್ನೆಗೆ ಆಮಿರ್ ಖಾನ್ ಉತ್ತರ ನೀಡಿದ್ದು, ನನ್ನ ಹೆಂಡತಿ ಗೌರಿ ಸ್ಟ್ರಾಟ್ ಹಿಂದು ಅಲ್ಲ, ಅವರು ಕ್ರಿಶ್ಚಿಯನ್ ಎಂದಿದ್ದಾರೆ. ನಮ್ಮ ಕುಟುಂಬದಲ್ಲಿ ಅಂತರ್ಧರ್ಮೀಯ ಮದುವೆಗಳಿಗೆ ಯಾವುದೇ ನಿರ್ಬಂಧ ಇಲ್ಲ. ಮದುವೆಯಾಗಿ ಬರುವ ಯಾರಿಗೂ ಧರ್ಮ ಬದಲಾವಣೆಗ ಮಾಡುವಂತೆ ಹೇಳಿಲ್ಲ. ಹೇಳುವುದೂ ಇಲ್ಲ. ನನ್ನ ಕುಟುಂಬ ವಿಶಾಲ ಹೃದಯ ಹೊಂದಿದೆ. ಎಲ್ಲರನ್ನೂ ಮುಕ್ತ ಹೃದಯದಿಂದ ಅವರು ಹೇಗಿದ್ದಾರೋ ಹಾಗೆ ಒಪ್ಪುವ ಗುಣವಿದೆ. ನನ್ನ ಇಬ್ಬರು ಸಹೋದರಿಯರು ಹಿಂದುಗಳನ್ನು ವಿವಾಹವಾಗಿದ್ದಾರೆ. ಮಗಳು ಇರಾ ಖಾನ್ ಕೂಡ ಹಿಂದು ಯುವಕನನ್ನು ಮದುವೆಯಾಗಿದ್ದಾಳೆ. ನನ್ನ ಸೋದರ ಸಂಬಂಧಿ ಮನ್ಸೂರ್ ಕ್ರಿಶ್ಚಿಯನ್ ಮಹಿಳೆಯರನ್ನು ವರಿಸಿದ್ದಾರೆ. ನಮ್ಮಲ್ಲಿ ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲರೂ ಇದ್ದಾರೆ ಎಂದಿದ್ದಾರೆ.
ಗೌರಿ, ಕಿರಣ್ ಹಾಗೂ ರೀನಾ ದತ್ತಾ ತಮ್ಮ ಧರ್ಮವನ್ನು ಬದಲಾಯಿಸಿಲ್ಲ. ನಮ್ಮದ್ದು ಕೋರ್ಟ್ ಮ್ಯಾರೇಜ್. ನನ್ನ ಪತ್ನಿ ಗೌರಿ ಕ್ರಿಶ್ಚಿಯನ್. ಅದೂ ಕೂಡ ಧಾರ್ಮಿಕ ಆಚರಣೆಗಳನ್ನು ಅಷ್ಟಾಗಿ ಪಾಲಿಸದ ಕ್ರಿಶ್ಚಿಯನ್ ಕುಟುಂಬಕ್ಕೆ ಸೇರಿದಾಕೆ ಎಂದಿದ್ದಾರೆ.



