July 15, 2026
Wednesday, July 15, 2026
spot_img

ಒಂದೇ ದೇಶದಲ್ಲಿ ನೂರಾರು ‘ಹಾಲೆಂಡ್’ ಜನನ! ನಾರ್ವೆ ಸ್ಟ್ರೈಕರ್ ಗೆ ಅಪರೂಪದ ಗೌರವ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಸಕ್ತ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ನಾರ್ವೆಯ ಸ್ಟ್ರೈಕರ್ ಎರ್ಲಿಂಗ್ ಹಾಲೆಂಡ್ ಹೊಸ ಇತಿಹಾಸ ಸೃಷ್ಟಿಸುತ್ತಿದ್ದಾರೆ. ಮೈದಾನದಲ್ಲಿ ತಮ್ಮ ಸ್ಫೋಟಕ ಗೋಲುಗಳ ಮೂಲಕ ಹಾಗೂ ಮೈದಾನದ ಹೊರಗೆ ಆಪ್ತ ಸ್ವಭಾವದಿಂದ ಅವರು ಜಾಗತಿಕವಾಗಿ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. 28 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ನಾರ್ವೆ ತಂಡವನ್ನು ಮೊದಲ ಬಾರಿಗೆ ಕ್ವಾರ್ಟರ್ ಫೈನಲ್‌ಗೆ ಮುನ್ನಡೆಸಿದ ಕೀರ್ತಿ ಇವರದ್ದಾಗಿದೆ.

ಪೆರುವಿನಲ್ಲಿ ಸೃಷ್ಟಿಯಾದ ‘ಹಾಲೆಂಡ್’ ಜ್ವರ!

ವಿಶ್ವಕಪ್‌ನ ಚೊಚ್ಚಲ ಸೀಸನ್‌ನಲ್ಲೇ ಹಾಲೆಂಡ್ ಭರ್ಜರಿ 7 ಗೋಲುಗಳನ್ನು ಬಾರಿಸಿ ಮಿಂಚಿದ್ದಾರೆ. ವಿಶೇಷವಾಗಿ ಬ್ರೆಜಿಲ್ ವಿರುದ್ಧದ ಪ್ರಮುಖ ಪಂದ್ಯದಲ್ಲಿ ಹೊಡೆದ 2 ನಿರ್ಣಾಯಕ ಗೋಲುಗಳು ಇವರ ಜನಪ್ರಿಯತೆಯನ್ನು ದುಪ್ಪಟ್ಟು ಮಾಡಿದೆ. ಇದರ ಬೆನ್ನಲ್ಲೇ ಪೆರು ದೇಶದಲ್ಲಿ ಹಾಲೆಂಡ್ ಕ್ರೇಜ್ ತಾರಕಕ್ಕೇರಿದೆ.

ನವಜಾತ ಶಿಶುಗಳಿಗೆ ಫುಟ್‌ಬಾಲ್ ತಾರೆಯ ಹೆಸರು

ಪೆರುವಿನ ರಾಷ್ಟ್ರೀಯ ನಾಗರಿಕ ನೋಂದಣಿ ಇಲಾಖೆ (RENIEC) ನೀಡಿರುವ ಅಧಿಕೃತ ಮಾಹಿತಿ ಪ್ರಕಾರ, ಅಲ್ಲಿನ ಪೋಷಕರು ತಮ್ಮ ಮಕ್ಕಳಿಗೆ ಈ ಸ್ಟಾರ್ ಆಟಗಾರನ ಹೆಸರಿಡಲು ಮುಗಿಬೀಳುತ್ತಿದ್ದಾರೆ.

  • 468 ಶಿಶುಗಳಿಗೆ ಈಗಾಗಲೇ ‘ಹಾಲೆಂಡ್’ ಎಂದು ನಾಮಕರಣ ಮಾಡಲಾಗಿದೆ. 91 ನವಜಾತ ಶಿಶುಗಳಿಗೆ ‘ಎರ್ಲಿಂಗ್ ಹಾಲೆಂಡ್’ ಎಂಬ ಪೂರ್ಣ ಹೆಸರನ್ನು ನೋಂದಾಯಿಸಲಾಗಿದೆ.

“ನಾರ್ವೆ ತಂಡ ಕ್ವಾರ್ಟರ್ ಫೈನಲ್ ಪ್ರವೇಶಿಸುತ್ತಿದ್ದಂತೆ, ಪೆರುವಿನಲ್ಲಿ ಈ ಹೆಸರುಗಳ ನೋಂದಣಿ ಪ್ರಕ್ರಿಯೆ ಗಣನೀಯವಾಗಿ ಏರಿಕೆಯಾಗಿದೆ. ಪೆರು ಜನತೆಗೆ ಮಕ್ಕಳ ಹೆಸರಿಡಲು ಫುಟ್‌ಬಾಲ್ ತಾರೆಗಳೇ ದೊಡ್ಡ ಪ್ರೇರಣೆ,” ಎಂದು ರೆನಿಕ್ ವಕ್ತಾರ ಇವಾನ್ ಟೊರೆಸ್ ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !