ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಲಬುರಗಿ ಕೇಂದ್ರ ಕಾರಾಗೃಹದಿಂದ ಮೂವರು ಕೈದಿಗಳು ಪರಾರಿಯಾದ ಪ್ರಕರಣವು ಇದೀಗ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನಡುವೆ ವೈಯಕ್ತಿಕ ಮತ್ತು ರಾಜಕೀಯ ವಾಗ್ದಾಳಿಗೆ ವೇದಿಕೆಯಾಗಿದೆ. ಸರ್ಕಾರದ ವೈಫಲ್ಯವನ್ನು ಪ್ರಶ್ನಿಸಿದ ವಿರೋಧ ಪಕ್ಷಗಳಿಗೆ ಪ್ರಿಯಾಂಕ್ ಖರ್ಗೆ ಹಳೇ ಇತಿಹಾಸದ ಕೌಂಟರ್ ನೀಡಿದರೆ, ವಿಜಯೇಂದ್ರ ಅವರು ಗೃಹ ಸಚಿವರ ಯೋಗ್ಯತೆಯನ್ನೇ ಪ್ರಶ್ನಿಸಿ ತಿರುಗೇಟು ನೀಡಿದ್ದಾರೆ.
ಬಿಜೆಪಿಗೆ ಇತಿಹಾಸ ನೆನಪಿಸಿದ ಪ್ರಿಯಾಂಕ್ ಖರ್ಗೆ:
ತಮ್ಮ ಮೇಲಿನ ಟೀಕೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, “ಟೀಕೆ ಮಾಡಲು ಬಾಯ್ತೆರೆದು ಕುಳಿತಿರುವ ಬಿಜೆಪಿ ನಾಯಕರು ಒಮ್ಮೆ ತಮ್ಮ ಅವಧಿಯಲ್ಲಿ ರಾಜ್ಯದ ಜೈಲುಗಳ ಸ್ಥಿತಿ ಹೇಗಿತ್ತು ಎಂಬುದನ್ನು ಅವಲೋಕನ ಮಾಡಿಕೊಳ್ಳಲಿ. 2010ರಲ್ಲಿ ಇದೇ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೊಪ್ಪಳ ಜಿಲ್ಲಾ ಕಾರಾಗೃಹದಿಂದ ಬರೋಬ್ಬರಿ 8 ಕೈದಿಗಳು ಪರಾರಿಯಾಗಿದ್ದರು. ಅದು ಅಂದಿನ ಗೃಹಸಚಿವರ ವೈಫಲ್ಯವೆಂದು ಬಿಜೆಪಿ ಒಪ್ಪಿಕೊಳ್ಳುತ್ತದೆಯೇ? ನಿಮ್ಮ ಅವಧಿಯಲ್ಲಿ ಪರಪ್ಪನ ಅಗ್ರಹಾರ ಜೈಲು ಕೈದಿಗಳಿಗೆ ಸಕಲ ಸವಲತ್ತು ಸಿಗುವ ಅತಿಥಿ ಗೃಹವಾಗಿ ಮಾರ್ಪಟ್ಟಿತ್ತು” ಎಂದು ಇತಿಹಾಸ ಕೆದಕಿದರು.
ಇದನ್ನೂ ಓದಿ:
ಬಿ.ವೈ. ವಿಜಯೇಂದ್ರ ತಿರುಗೇಟು:
ಪ್ರಿಯಾಂಕ್ ಖರ್ಗೆ ಅವರ ಇತಿಹಾಸದ ವಾದಕ್ಕೆ ಅಷ್ಟೇ ಕಡಕ್ಕಾಗಿ ಕೌಂಟರ್ ನೀಡಿರುವ ಬಿ.ವೈ. ವಿಜಯೇಂದ್ರ, “ಐಸಿಸ್ ಉಗ್ರನಿಗೆ ರಾಜಾತಿಥ್ಯ ನೀಡಿದ ಮಹಾನ ಸರ್ಕಾರದ ಮಹಾನ್ ಗೃಹ ಸಚಿವರೇ, ನೀವು ಆರ್‌ಎಸ್ಎಸ್ (RSS) ಬಗ್ಗೆ ಚಿಂತೆ ಮಾಡುವುದನ್ನು ಬಿಡಿ. ನಿಮ್ಮ ತವರು ಜಿಲ್ಲೆಯ ಜೈಲಿನಿಂದಲೇ ಕೈದಿಗಳು ತಪ್ಪಿಸಿಕೊಂಡಿದ್ದು ನಿಮ್ಮ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದಿದ್ದಾರೆ.



