July 16, 2026
Thursday, July 16, 2026
spot_img

ಚಿಂತೆ ಬಿಡಿ ತಿಂಡಿ ಮಾಡಿ 29 | ಪನೀರ್ ಭುರ್ಜಿ ಜೊತೆ ಮಲ್ಟಿಗ್ರೇನ್ ಟೋಸ್ಟ್ ಟ್ರೈ ಮಾಡಿದ್ದೀರಾ?

ಬೆಳಗಿನ ಉಪಾಹಾರವು ದಿನವಿಡೀ ದೇಹಕ್ಕೆ ಶಕ್ತಿ ನೀಡುವ ಪ್ರಮುಖ ಊಟವಾಗಿದೆ. ಕಡಿಮೆ ಸಮಯದಲ್ಲಿ ಸುಲಭವಾಗಿ ತಯಾರಿಸಬಹುದಾದ, ಹೆಚ್ಚಿನ ಪ್ರೋಟೀನ್ ಹೊಂದಿರುವ ಹಾಗೂ ತೂಕ ನಿಯಂತ್ರಣಕ್ಕೂ ಸಹಾಯಕವಾಗುವ ಉಪಾಹಾರ ಬೇಕೆಂದರೆ ಪನೀರ್ ಭುರ್ಜಿ ಜೊತೆ ಮಲ್ಟಿಗ್ರೇನ್ ಟೋಸ್ಟ್ ಬೆಸ್ಟ್.

ಬೇಕಾಗುವ ಪದಾರ್ಥಗಳು

ಪನೀರ್ – 200 ಗ್ರಾಂ
ಮಲ್ಟಿಗ್ರೇನ್ ಬ್ರೆಡ್ – 2 ಸ್ಲೈಸ್
ಈರುಳ್ಳಿ – 1
ಟೊಮೆಟೊ – 1
ಹಸಿಮೆಣಸಿನಕಾಯಿ – 1
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
ಅರಿಶಿನ – ¼ ಟೀಸ್ಪೂನ್
ಕೆಂಪು ಮೆಣಸಿನ ಪುಡಿ – ½ ಟೀಸ್ಪೂನ್
ಜೀರಿಗೆ – ½ ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು – ಸ್ವಲ್ಪ
ಎಣ್ಣೆ ಅಥವಾ ತುಪ್ಪ – 1 ಟೀಸ್ಪೂನ್

ಮಾಡುವ ವಿಧಾನ

ಪ್ಯಾನ್‌ ಬಿಸಿ ಮಾಡಿ ಎಣ್ಣೆ ಅಥವಾ ತುಪ್ಪ ಹಾಕಿ ಜೀರಿಗೆ ಸಿಡಿಸಿ.

ಈರುಳ್ಳಿ ಹಾಕಿ ಗೋಲ್ಡನ್ ಬಣ್ಣ ಬರುವವರೆಗೆ ಹುರಿಯಿರಿ.

ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸಿನಕಾಯಿ ಮತ್ತು ಟೊಮೆಟೊ ಸೇರಿಸಿ ಚೆನ್ನಾಗಿ ಬೇಯಿಸಿ.

ಅರಿಶಿನ, ಕೆಂಪು ಮೆಣಸಿನ ಪುಡಿ ಮತ್ತು ಉಪ್ಪು ಸೇರಿಸಿ ಕಲಸಿ.

ಪುಡಿಮಾಡಿದ ಪನೀರ್ ಸೇರಿಸಿ 2–3 ನಿಮಿಷಗಳ ಕಾಲ ನಿಧಾನ ಉರಿಯಲ್ಲಿ ಕಲಸಿ.

ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಸೇರಿಸಿ ಸ್ಟೌವ್ ಆಫ್ ಮಾಡಿ.

ಮಲ್ಟಿಗ್ರೇನ್ ಬ್ರೆಡ್ ಅನ್ನು ಟೋಸ್ಟ್ ಮಾಡಿ, ಅದರೊಂದಿಗೆ ಬಿಸಿ ಬಿಸಿ ಪನೀರ್ ಭುರ್ಜಿ ಸವಿಯಿರಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !