July 16, 2026
Thursday, July 16, 2026
spot_img

ಯುವತಿಯರ ಮಾಸ್ಟರ್ ಪ್ಲಾನ್‌ಗೆ ಬಯಲಾಯ್ತು ಡೆಲಿವರಿ ಬಾಯ್‌ ಡಬಲ್ ಲೈಫ್: ಏನಿದು ಕಥೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮನೆ ಹೊರಗೆ ಒಣ ಹಾಕಿದ್ದ ಮಹಿಳೆಯರ ಒಳ ಉಡುಪುಗಳು ಪದೇ ಪದೇ ನಾಪತ್ತೆಯಾಗುತ್ತಿದ್ದ ಪ್ರಕರಣವನ್ನು ಇಬ್ಬರು ಯುವತಿಯರು ತಮ್ಮ ಚಾಣಾಕ್ಷತನದಿಂದ ಬಯಲಿಗೆಳೆದಿದ್ದಾರೆ.

ಹಿಡನ್ ಕ್ಯಾಮೆರಾ ಅಳವಡಿಸಿ ಸಾಕ್ಷ್ಯ ಸಂಗ್ರಹಿಸಿದ ಬಳಿಕ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಹಿಡನ್ ಕ್ಯಾಮೆರಾದಲ್ಲಿ ಬಯಲಾಯ್ತು ಕೃತ್ಯ

ಇಂದಿರಾನಗರ ಪ್ರದೇಶದಲ್ಲಿ ಕೆಲ ದಿನಗಳಿಂದ ರಾತ್ರಿ ವೇಳೆ ಒಳ ಉಡುಪುಗಳು ಕಾಣೆಯಾಗುತ್ತಿದ್ದವು. ಅನುಮಾನಗೊಂಡ ಯುವತಿಯರು ಮನೆ ಎದುರು ರಹಸ್ಯ ಕ್ಯಾಮೆರಾ ಅಳವಡಿಸಿದ್ದು, ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಕಳ್ಳತನ ನಡೆಸುತ್ತಿರುವ ದೃಶ್ಯ ದಾಖಲಾಗಿದೆ. ಈ ಸಾಕ್ಷ್ಯದ ಆಧಾರದಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ:

ಬಂಧನ, ಬಳಿಕ ಜಾಮೀನು

ಬಂಧಿತನನ್ನು ಅಸ್ಸಾಂ ಮೂಲದ ಅಬ್ದುಲ್ ಹುಸೇನ್ ಎಂದು ಗುರುತಿಸಲಾಗಿದೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಬಳಿಕ ಆತ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ. ರಾತ್ರಿ ನಾಪತ್ತೆಯಾಗಿದ್ದ ಉಡುಪುಗಳು ಬೆಳಗ್ಗೆ ಅದೇ ಸ್ಥಳದಲ್ಲಿ ಪತ್ತೆಯಾಗುತ್ತಿದ್ದುದರಿಂದ ಯುವತಿಯರಿಗೆ ಮೊದಲೇ ಅನುಮಾನ ಮೂಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !