July 16, 2026
Thursday, July 16, 2026
spot_img

ಭಾರತ-ಬ್ರಿಟನ್ ಒಪ್ಪಂದದ ಎಫೆಕ್ಟ್: ರಾಜ್ಯದಲ್ಲಿ ಪ್ರೀಮಿಯಂ ಮದ್ಯದ ಬೆಲೆ ಮತ್ತಷ್ಟು ಇಳಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ-ಬ್ರಿಟನ್ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದ (CETA) ಜಾರಿಗೆ ಬಂದ ಬೆನ್ನಲ್ಲೇ ಕರ್ನಾಟಕದಲ್ಲಿ ಪ್ರೀಮಿಯಂ ಸ್ಕಾಚ್ ವಿಸ್ಕಿ ಹಾಗೂ ಜಿನ್ ಸೇರಿದಂತೆ ಆಮದು ಮದ್ಯದ ಬೆಲೆ ಮತ್ತಷ್ಟು ಇಳಿಯುವ ಸಾಧ್ಯತೆ ಗೋಚರಿಸಿದೆ.

ಸುಂಕ ಇಳಿಕೆ, ಬೆಲೆಯಲ್ಲೂ ಕಡಿತ

ಜುಲೈ 15ರಿಂದ ಜಾರಿಗೆ ಬಂದ CETA ಒಪ್ಪಂದದಡಿ ಸ್ಕಾಚ್ ವಿಸ್ಕಿ ಮೇಲಿನ ಆಮದು ಸುಂಕವನ್ನು ಶೇ.150ರಿಂದ ಶೇ.75ಕ್ಕೆ ಇಳಿಸಲಾಗಿದ್ದು, ಮುಂದಿನ 10 ವರ್ಷಗಳಲ್ಲಿ ಅದನ್ನು ಶೇ.40ಕ್ಕೆ ತಗ್ಗಿಸಲಾಗುತ್ತದೆ. ಇದರ ಪರಿಣಾಮವಾಗಿ ಪ್ರೀಮಿಯಂ ಮದ್ಯದ ಬೆಲೆಯಲ್ಲಿ ಹೆಚ್ಚುವರಿಯಾಗಿ ಶೇ.5ರಿಂದ 7ರಷ್ಟು ಇಳಿಕೆ ಆಗುವ ನಿರೀಕ್ಷೆಯಿದೆ.

ಇದನ್ನೂ ಓದಿ:

ಈಗಾಗಲೇ ಬೆಲೆ ಇಳಿದಿತ್ತು

ಕರ್ನಾಟಕ ಸರ್ಕಾರ ಮೇ ತಿಂಗಳಲ್ಲಿ ಜಾರಿಗೆ ತಂದ ಹೊಸ ಎಕ್ಸೈಸ್ ತೆರಿಗೆ ವ್ಯವಸ್ಥೆಯಿಂದಲೇ ಆಮದು ಮದ್ಯದ ಗರಿಷ್ಠ ಚಿಲ್ಲರೆ ಬೆಲೆ (MRP) ಶೇ.15ರಿಂದ 23ರಷ್ಟು ಕಡಿಮೆಯಾಗಿತ್ತು. ಈಗ ಭಾರತ-ಯುಕೆ ಒಪ್ಪಂದದ ಲಾಭವೂ ಸೇರಿ ಗ್ರಾಹಕರಿಗೆ ಇನ್ನಷ್ಟು ಬೆಲೆ ರಿಯಾಯಿತಿ ಸಿಗುವ ಸಾಧ್ಯತೆ ಇದೆ.

ದೇಶೀಯ ಕಂಪನಿಗಳಿಗೆ ಸವಾಲು, ಅವಕಾಶವೂ ಇದೆ

ಸುಂಕ ಇಳಿಕೆಯಿಂದ ಬಲ್ಕ್ ಸ್ಕಾಚ್ ಆಮದು ಹೆಚ್ಚಾಗಲಿದ್ದು, ದೇಶೀಯ ಮದ್ಯ ತಯಾರಕರಿಗೆ ಸ್ಪರ್ಧೆ ಹೆಚ್ಚಾಗುವ ಸಾಧ್ಯತೆ ಇದೆ. ಆದರೆ, ಉತ್ತಮ ಗುಣಮಟ್ಟದ ಉತ್ಪನ್ನಗಳು, ಹೆಚ್ಚಿನ ಆಯ್ಕೆ ಮತ್ತು ಮಿತವಾದ ಬೆಲೆ ಇಳಿಕೆ ಗ್ರಾಹಕರಿಗೆ ಪ್ರಮುಖ ಲಾಭವಾಗಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !