August 6, 2026
Thursday, August 6, 2026
spot_img

ಹಾಲಿವುಡ್‌ ಬಿಗ್ ಆಫರ್‌ಗೆ ಫಹಾದ್ ‘ನೋ’ ಅಂದಿದ್ದು ಯಾಕೆ?: ಕಾರಣ ಕೇಳಿದ್ರೆ ಶಾಕ್ ಆಗ್ತೀರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಲಯಾಳಂ ನಟ ಫಹಾದ್ ಫಾಸಿಲ್ ಅವರಿಗೆ ಟಾಮ್ ಕ್ರೂಸ್ ಅಭಿನಯದ ಹಾಲಿವುಡ್ ಸಿನಿಮಾದಲ್ಲಿ ಪ್ರಮುಖ ಪಾತ್ರದ ಅವಕಾಶ ಬಂದಿದ್ದರೂ, ವೈಯಕ್ತಿಕ ಹಾಗೂ ವೃತ್ತಿಪರ ಕಾರಣಗಳಿಂದ ಅದನ್ನು ಸ್ವೀಕರಿಸದೆ ಹಿಂದೆ ಸರಿದಿರುವ ಮಾಹಿತಿ ಇದೀಗ ಬೆಳಕಿಗೆ ಬಂದಿದೆ.

ಆಡಿಷನ್ ಬಳಿಕ ಬಂದ ಆಫರ್

ಆಸ್ಕರ್ ವಿಜೇತ ನಿರ್ದೇಶಕ ಅಲೆಹಾಂಡ್ರೊ ಗೊಂಜಾಲೆಸ್ ಇನ್ಯಾರಿಟ್ಟು ನಿರ್ದೇಶನದ ಡಿಗ್ಗರ್ ಸಿನಿಮಾಕ್ಕಾಗಿ ಫಹಾದ್ ವಿಡಿಯೋ ಆಡಿಷನ್ ನೀಡಿದ್ದರು. ಅವರ ಅಭಿನಯ ಮೆಚ್ಚುಗೆ ಪಡೆದಿದ್ದರೂ, ಉಚ್ಚಾರಣೆ ಮತ್ತು ಇಂಗ್ಲಿಷ್ ಮಾತಿನ ಶೈಲಿಗೆ ಹೆಚ್ಚುವರಿ ತರಬೇತಿ ಪಡೆಯುವಂತೆ ಸೂಚಿಸಲಾಗಿತ್ತು.

ಇದನ್ನೂ ಓದಿ:

ಅವಕಾಶ ಕೈಬಿಡಲು ಕಾರಣ

ಅಮೆರಿಕದಲ್ಲಿ ಹಲವು ತಿಂಗಳು ತರಬೇತಿ ಪಡೆದು ಚಿತ್ರೀಕರಣದಲ್ಲಿ ಭಾಗವಹಿಸಬೇಕಿದ್ದ ಕಾರಣ, ಈಗಾಗಲೇ ಒಪ್ಪಿಕೊಂಡಿದ್ದ ಭಾರತೀಯ ಸಿನಿಮಾಗಳ ವೇಳಾಪಟ್ಟಿಗೆ ಅಡ್ಡಿಯಾಗಲಿದೆ ಎಂದು ಫಹಾದ್ ಈ ಆಫರ್ ಅನ್ನು ಕೈಬಿಟ್ಟಿದ್ದಾರೆ ಎನ್ನಲಾಗಿದೆ.

ಪಾತ್ರ ಯಾರ ಪಾಲಾಯಿತು?

ಫಹಾದ್ ತಿರಸ್ಕರಿಸಿದ ಪಾತ್ರವನ್ನು ಬಳಿಕ ಬ್ರಿಟಿಷ್-ಪಾಕಿಸ್ತಾನ ಮೂಲದ ನಟ ರಿಜ್ ಅಹ್ಮದ್ ಪಡೆದಿದ್ದಾರೆ. ಟಾಮ್ ಕ್ರೂಸ್ ಜೊತೆಗೆ ಪ್ರಮುಖ ಪಾತ್ರದಲ್ಲಿ ಅವರು ಅಭಿನಯಿಸಿದ್ದು, ಡಿಗ್ಗರ್ ಸಿನಿಮಾ ಅಕ್ಟೋಬರ್‌ನಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗುವ ನಿರೀಕ್ಷೆಯಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !