July 17, 2026
Friday, July 17, 2026
spot_img

ಲಿವಿನ್‌ ದಂಪತಿಯ ಎರಡು ವರ್ಷದ ಮಗು ಸಾ*ವು: ಇದು ಕೊಲೆ ಎಂದು ದೂರು ಕೊಟ್ಟ ಸ್ನೇಹಿತೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನಲ್ಲಿ ಲಿವಿನ್‌ನಲ್ಲಿದ್ದ ದಂಪತಿಯ ಎರಡು ವರ್ಷದ ಮಗು ಮೃತಪಟ್ಟಿದ್ದು, ಈ ಬಗ್ಗೆ ಅನುಮಾನ ವ್ಯಕ್ತವಾಗಿದೆ.

ಇಂದಿರಾ ಸ್ಟ್ರೀಟ್‌ನಲ್ಲಿ ವಾಸವಿರುವ ಜೇಸನ್‌ ಆಂಥೋನಿ ಹಾಗೂ ರೋಸ್ಲಿನ್‌ ಅವರ ಎರಡು ವರ್ಷದ ಮಗಳು ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದಾಳೆ ಎಂದು ಹೇಳಲಾಗಿದೆ. ಆದರೆ ಈ ಬಗ್ಗೆ ಇಬ್ಬರ ಆಪ್ತ ಸ್ನೇಹಿತರೊಬ್ಬರು ದೂರು ದಾಖಲಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಎರಡು ವರ್ಷದಿಂದ ಲಿವ್‌ಇನ್‌ನಲ್ಲಿ ದಂಪತಿಯ ಕಂದನಿಗೆ ಏಕಾಏಕಿ ಉಸಿರಾಟದ ತೊಂದರೆಯಾಯ್ತು ಆಸ್ಪತ್ರೆಗೆ ಕರೆದೊಯ್ತುವ ಮುನ್ನವೇ ಮಗು ಮೃತಪಟ್ಟಿದೆ ಎಂದು ಹೇಳಲಾಗಿದೆ. ಆದರೆ ಅವರ ಸ್ನೇಹಿತೆಯ ಪ್ರಕಾರ ತಾಯಿ ಇನ್ನೂ ಮಾತು ಬಾರದ ಮಗಳಿಗೆ ಹೊಡೆಯುತ್ತಿದ್ದರು ಎನ್ನುವುದು ತಿಳಿದುಬಂದಿದೆ. ಮಗುವಿನ ಮೃತದೇಹದ ಮೇಲೆ ಗಾಯದ ಗುರುತುಗಳು ಪತ್ತೆಯಾಗಿರುವುದು ಪೊಲೀಸರ ಅನುಮಾನಕ್ಕೆ ಪುಷ್ಠಿ ನೀಡಿದೆ.

ಸ್ನೇಹಿತೆ ಪೊಲೀಸರ ಬಳಿ ಬಂದು ಇದು ಅನುಮಾನಾಸ್ಪದ ಸಾವು, ಮಗುವಿಗೆ ಹೊಡೆಯುತ್ತಿದ್ದುದನ್ನು ಕಣ್ಣಾರೆ ನೋಡಿದ್ದೇನೆ ಎಂದು ದೂರಿದ್ದಾರೆ. ಸದ್ಯ ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ನಂತರ ಪ್ರಕರಣದ ಸತ್ಯಾಸತ್ಯತೆ ತಿಳಿಯಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !