July 18, 2026
Saturday, July 18, 2026
spot_img

ಮೆಕ್ಸಿಕೋದಲ್ಲಿ 7.3 ತೀವ್ರತೆಯ ಭೂಕಂಪನ: ಕರಾವಳಿಗೆ ಸುನಾಮಿ ಎಚ್ಚರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೆಕ್ಸಿಕೋದ ದಕ್ಷಿಣ ಪೆಸಿಫಿಕ್ ಕರಾವಳಿ ಭಾಗದಲ್ಲಿ ಶುಕ್ರವಾರ 7.3 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಗ್ವಾಟೆಮಾಲಾ ಗಡಿ ಪ್ರದೇಶದಲ್ಲಿ ಭಾರೀ ಕಂಪನ ಉಂಟಾಗಿದೆ. ಭೂಕಂಪದ ಪರಿಣಾಮ ಮೆಕ್ಸಿಕೋ ಸಿಟಿ ಸೇರಿದಂತೆ ಗ್ವಾಟೆಮಾಲಾ ಮತ್ತು ಎಲ್‌ ಸಾಲ್ವಡಾರ್‌ನಲ್ಲೂ ಅನುಭವವಾಗಿದ್ದು, ಜನರು ಆತಂಕದಿಂದ ಮನೆ ಹಾಗೂ ಕಚೇರಿಗಳಿಂದ ಹೊರಗೆ ಓಡಿ ಬಂದಿದ್ದಾರೆ.

ಕರಾವಳಿಗೆ ಸುನಾಮಿ ಎಚ್ಚರಿಕೆ

ಭೂಕಂಪದ ಕೇಂದ್ರಬಿಂದು ಚಿಯಾಪಾಸ್ ಕರಾವಳಿಯ ಸಮೀಪದಲ್ಲಿದ್ದು, ಸುಮಾರು 15 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಮೆಕ್ಸಿಕೋ ಮತ್ತು ಗ್ವಾಟೆಮಾಲಾ ಕರಾವಳಿಯಲ್ಲಿ ಒಂದು ಮೀಟರ್ ಎತ್ತರದವರೆಗೆ ಸುನಾಮಿ ಅಲೆಗಳು ಏಳುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ:

ದೊಡ್ಡ ಹಾನಿ ವರದಿಯಾಗಿಲ್ಲ

ಪ್ರಾಥಮಿಕ ಮಾಹಿತಿ ಪ್ರಕಾರ ಯಾವುದೇ ಜೀವಹಾನಿ ಅಥವಾ ದೊಡ್ಡ ಮಟ್ಟದ ಆಸ್ತಿ ಹಾನಿ ವರದಿಯಾಗಿಲ್ಲ. ಆದರೆ ಕರಾವಳಿ ಪ್ರದೇಶಗಳಲ್ಲಿ ನಿಗಾ ಹೆಚ್ಚಿಸಲಾಗಿದ್ದು, ಸ್ಥಳೀಯ ಆಡಳಿತ ಪರಿಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸುತ್ತಿದೆ. ಮೆಕ್ಸಿಕೋ ಸರ್ಕಾರ ಸಾರ್ವಜನಿಕರಿಗೆ ಕರಾವಳಿ ಪ್ರದೇಶಗಳಿಂದ ದೂರವಿರಲು ಹಾಗೂ ಅಧಿಕಾರಿಗಳ ಸೂಚನೆಗಳನ್ನು ಪಾಲಿಸುವಂತೆ ಮನವಿ ಮಾಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !