ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ನಗರದ ಪಾದಚಾರಿ ಮಾರ್ಗಗಳಲ್ಲಿ ಅನಾಥ ವಾಹನಗಳನ್ನು ತೆರವುಗೊಳಿಸುವ ಬೃಹತ್ ಕಾರ್ಯಾಚರಣೆ ಆರಂಭವಾಗಿದೆ.
ಮಲ್ಲೇಶ್ವರದ ಎಂ.ಡಿ. ಬ್ಲಾಕ್‌ನಲ್ಲಿ ಕಾರ್ಯಾಚರಣೆಗೆ ಚಾಲನೆ ನೀಡಿದ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಅನಾಥ ವಾಹನಗಳ ಓನರ್‌ಗಳು ಜಿಬಿಎಗೆ ಬಂದು ವಾಹನ ನಮ್ಮದು ಎಂದು ದಾಖಲೆ ತೋರಿಸಿ ತೆಗೆದುಕೊಂಡು ಹೋಗಬೇಕು. ಇಲ್ಲವಾದರೆ ಹರಾಜು ಹಾಕುತ್ತೀವಿ ಎಂದಿದ್ದಾರೆ.
ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಜಿಬಿಎ ಹಾಗೂ ಸಂಚಾರ ಪೊಲೀಸರು ಒಟ್ಟಾರೆ 2700 ಅನಾಥ ವಾಹನಗಳನ್ನು ಪಟ್ಟಿ ಮಾಡಿದ್ದಾರೆ. ಒಂದು ವಾರದ ಮೊದಲೇ ಗಾಡಿ ಮೇಲೆ ನೊಟೀಸ್ ಅಂಟಿಸಲಾಗಿದೆ. ನೊಟೀಸ್ ನೀಡಿದ ಮೇಲೂ ವಾಹನ ಅದೇ ಜಾಗದಲ್ಲಿ ಇದ್ದರೆ ಅದನ್ನು ಟೋಯಿಂಗ್ ಮಾಡ್ತೇವೆ ಎಂದಿದ್ದಾರೆ.
ಇನ್ನು ಟೋಯಿಂಗ್ ಮಾಡಿದ ನಂತರವೂ ಜಿಬಿಎ ಜಾಗದಲ್ಲಿ ಹದಿನೈದು ದಿನ ಈ ಗಾಡಿಗಳನ್ನು ಇಟ್ಟುಕೊಳ್ತೇವೆ. ಆಗಲಾದರೂ ಮಾಲೀಕರು ಗಾಡಿಯನ್ನು ದಂಡ ಕಟ್ಟಿ ತೆಗೆದುಕೊಂಡು ಹೋಗಬೇಕು. ಇಲ್ಲವಾದರೆ ಕಾನೂನು ಪ್ರಕಾರ ಹರಾಜು ಪ್ರಕ್ರಿಯೆ ಆರಂಭಿಸುತ್ತೇವೆ ಎಂದಿದ್ದಾರೆ.



