October 9, 2026
Friday, October 9, 2026
spot_img

ಬೆಳಗಾವಿ–ಬಾಗಲಕೋಟೆ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ: ಬೈಕ್ ಸವಾರ ಸಾ*ವು

ಹೊಸದಿಗಂತ ವರದಿ ಬೆಳಗಾವಿ:

ರಸ್ತೆ ಅಪಘಾತದಲ್ಲಿ ಬೈಕ್‌ ಸವಾರನೊಬ್ಬ ಮೃತಪಟ್ಟ ಘಟನೆ ಬೆಳಗಾವಿ–ಬಾಗಲಕೋಟೆ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.

ರಾಮದುರ್ಗ ತಾಲೂಕಿನ ಗೊಡಚಿ ಗ್ರಾಮದ ಲಕ್ಷ್ಮಣ ಸಣ್ಣರಾಮಪ್ಪ ತಳಗೇರಿ (21) ಎಂದು ಗುರುತಿಸಲಾಗಿದೆ. ಮೃತ ಯುವಕ ಯರಗಟ್ಟಿ ಕಡೆಯಿಂದ ಬೆಳಗಾವಿ ಕಡೆಗೆ ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಬೈಕ್ ಚಲಿಸುತ್ತಿದ್ದ ಎನ್ನಲಾಗಿದೆ.

ನೇಸರಗಿ‌ ಸಮಿಪದ ಮೇಕಲಮರ್ಡಿ ಗ್ರಾಮದ ಬಳಿ ಅತೀ ವೇಗದಲ್ಲಿ ಬೈಕ್ ಚಲಾಯಿಸುತ್ತಿದ್ದ ವೇಳೆ ಹಿಂದಿನಿಂದ ಅಪರಿಚಿತ ವಾಹನ ಡಿಕ್ಕಿಯಾಗಿರುವ ಪರಿಣಾಮ ಬೈಕ್ ಸವಾರನನಿಗೆ ಹಣೆಗೆ ಗಂಭೀರವಾಗಿ ಪೆಟ್ಟಾಗಿರುವುದರಿಂದ ಸ್ಥಳದಲ್ಲಿಯೇ ಸಾವನಪ್ಪಿದ್ದಾನೆ.

ಇದನ್ನೂ ಓದಿ:

 ಘಟನಾ ಸ್ಥಳಕ್ಕೆ ನೇಸರಗಿ ಪೊಲೀಸರು ಬೇಟಿ ನೀಡಿ ಘಟನೆ ಕುರಿತು ಪರಿಶೀಲನೆ ನಡೆಸಿ, ನಂ. 106/2026, ಕಲಂ 281, 106(1) ಬಿಎನ್‌ಎಸ್ ಕಾಯ್ದೆ-2023ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Must Read