July 19, 2026
Sunday, July 19, 2026
spot_img

ಚಿಂತೆ ಬಿಡಿ ತಿಂಡಿ ಮಾಡಿ 32| ಹಲಸಿನ ಹಣ್ಣು ಇದ್ರೆ ಸಾಕು, 10 ನಿಮಿಷದಲ್ಲಿ ಮಾಡಿ ಈ ಸೂಪರ್ ಟೇಸ್ಟಿ ಪಡ್ಡು

ಪ್ರತಿದಿನ ಬೆಳಿಗ್ಗೆ ಅದೇ ಇಡ್ಲಿ, ದೋಸೆ ತಿಂದು ಬೇಜಾರಾಗಿದೆಯಾ? ಬೆಳಗಿನ ಉಪಾಹಾರಕ್ಕೆ ಏನಾದ್ರೂ ಹೊಸತು ಮತ್ತು ರುಚಿಕರವಾಗಿ ಮಾಡಬೇಕು ಅಂದುಕೊಂಡರೆ ಮನೆಯಲ್ಲಿರೋ ಹಲಸಿನ ಹಣ್ಣಿನಿಂದ ಕೇವಲ 10 ನಿಮಿಷದಲ್ಲಿ ಬಾಯಲ್ಲಿ ನೀರೂರಿಸುವ ಹಲಸಿನ ಹಣ್ಣಿನ ಪಡ್ಡು ಮಾಡಬಹುದು.

ಬೇಕಾಗುವ ಸಾಮಗ್ರಿಗಳು:

ಹಲಸಿನ ಹಣ್ಣಿನ ತೊಳೆಗಳು

ಅಕ್ಕಿ

ಬೆಲ್ಲ

ತುರಿದ ತೆಂಗಿನಕಾಯಿ

ಏಲಕ್ಕಿ ಪುಡಿ

ಉಪ್ಪು

ತುಪ್ಪ ಅಥವಾ ಅಡುಗೆ ಎಣ್ಣೆ

ಮಾಡುವ ವಿಧಾನ

ಮೊದಲುಅಕ್ಕಿಯನ್ನು 2-3 ಗಂಟೆಗಳ ಕಾಲ ನೀರಿನಲ್ಲಿ ಚೆನ್ನಾಗಿ ನೆನೆಸಿಡಿ. ನಂತರ ನೆನೆಸಿದ ಅಕ್ಕಿ, ಹಲಸಿನ ಹಣ್ಣಿನ ತೊಳೆಗಳು, ತುರಿದ ತೆಂಗಿನಕಾಯಿ ಮತ್ತು ಬೆಲ್ಲವನ್ನು ಮಿಕ್ಸಿ ಜಾರಿಗೆ ಹಾಕಿ. ಇದಕ್ಕೆ ಸ್ವಲ್ಪವೂ ನೀರು ಸೇರಿಸದೆ ದೋಸೆ ಹಿಟ್ಟಿನ ಹದಕ್ಕೆ ನುಣ್ಣಗೆ ರುಬ್ಬಿಕೊಳ್ಳಬೇಕು. ಬಳಿಕ ರುಬ್ಬಿದ ಮಿಶ್ರಣವನ್ನು ಒಂದು ಪಾತ್ರೆಗೆ ವರ್ಗಾಯಿಸಿ. ಅದಕ್ಕೆ ಚಿಟಿಕೆ ಉಪ್ಪು ಮತ್ತು ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಕಲೆಸಿ. ಪಡ್ಡು ಹಂಚನ್ನು ಒಲೆ ಮೇಲೆ ಇಟ್ಟು ಬಿಸಿ ಮಾಡಿ. ಪ್ರತಿ ಗುಳಿಗೂ ಸ್ವಲ್ಪ ತುಪ್ಪ ಅಥವಾ ಎಣ್ಣೆ ಹಾಕಿ. ಸಿದ್ಧಪಡಿಸಿದ ಹಿಟ್ಟನ್ನು ಪ್ರತಿ ಗುಳಿಗೂ ಮುಕ್ಕಾಲು ಭಾಗದಷ್ಟು ಹಾಕಿ. ಮುಚ್ಚಳ ಮುಚ್ಚಿ, ಮಧ್ಯಮ ಉರಿಯಲ್ಲಿ 2-3 ನಿಮಿಷ ಬೇಯಿಸಿ. ಪಡ್ಡು ಕೆಳಭಾಗ ಕಂದು ಬಣ್ಣಕ್ಕೆ ಬಂದ ನಂತರ, ಇನ್ನೊಂದು ಬದಿಗೆ ತಿರುಗಿಸಿ ಮತ್ತೆ ತುಪ್ಪ ಹಾಕಿ ಎರಡೂ ಬದಿಗಳು ಚೆನ್ನಾಗಿ ಬೇಯಿಸಿದರೆ, ರುಚಿರುಚಿಯಾದ ಹಲಸಿನ ಹಣ್ಣಿನ ಪಡ್ಡು ಸಿದ್ಧ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !