November 5, 2026
Thursday, November 5, 2026
spot_img

ಧನತ್ರಯೋದಶಿಯಂದು ಯಮನಿಗೆ ದೀಪ ಸಮರ್ಪಣೆ; ಇದರ ಹಿಂದಿದೆ ವಿಶೇಷ ನಂಬಿಕೆ!

ದೀಪಾವಳಿ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಪ್ರತಿ ಊರಿನಲ್ಲೂ, ಜಿಲ್ಲೆಯಲ್ಲೂ, ರಾಜ್ಯದಲ್ಲಿ ವಿಭಿನ್ನ ರೀತಿಯಲ್ಲಿ ಹಬ್ಬವನ್ನು ಆಚರಣೆಮಾಡಲಾಗುತ್ತದೆ. ದೀಪಾವಳಿ ಹಬ್ಬದ ಸಮಯದಲ್ಲಿ ಯಮದೀಪ ದಾನ ಮಾಡುವ ಸಂಪ್ರದಾಯದ ಬಗ್ಗೆ ತಿಳಿಯೋಣ ಬನ್ನಿ..

ದೀಪಾವಳಿಯ ಧನತ್ರಯೋದಶಿ ದಿನದಂದು ಯಮಧರ್ಮರಾಜನಿಗೆ ದೀಪ ಹಚ್ಚಿ ನಮಸ್ಕರಿಸುವುದನ್ನು ಯಮದೀಪ ದಾನ ಎಂದು ಕರೆಯಲಾಗುತ್ತದೆ. ಈ ರೀತಿ ಮಾಡಿದರೆ ಕುಟುಂಬದ ಸದಸ್ಯರಿಗೆ ಬರುವ ಅಕಾಲಿಕ ಮರಣ, ಆಕಸ್ಮಿಕ ಸಾವು, ಮಾರಣಾಂತಿಕ ಕಾಯಿಲೆಗಳು ಬರುವುದಿಲ್ಲ. ಇದೆಲ್ಲದರಿಂದ ರಕ್ಷಣೆ ಸಿಗುತ್ತದೆ ಎನ್ನುವುದು ನಂಬಿಕೆ.

ಯಮರಾಜನ ಪ್ರೀತಿಗೆ ಪಾತ್ರರಾದರೆ ಕುಟುಂಬದ ಸದಸ್ಯರಿಗೆ ಆರೋಗ್ಯ, ಆಯಸ್ಸು, ಸುಖ, ಶಾಂತಿ ನೆಲೆಸುತ್ತದೆ ಎಂದು ಹೇಳಲಾಗಿದೆ. ಗೋಧಿ ಹಿಟ್ಟಿನಿಂದ ಅಥವಾ ಮಣ್ಣಿನಿಂದ ನಾಲ್ಕು ಮುಖಗಳಿರುವ ದೀಪವನ್ನು ತಯಾರಿಸಲಾಗುತ್ತದೆ.

ಇದಕ್ಕೆ ಎಣ್ಣೆ ಹಾಕಿ, ನಾಲ್ಕು ಕಡೆ ಬತ್ತಿಗಳನ್ನು ಇಟ್ಟು ದೀಪ ಹೊತ್ತಿಸಲಾಗುತ್ತದೆ. ಸಂಜೆ ಅಥವಾ ರಾತ್ರಿ ಇದನ್ನು ಮನೆಯ ಮುಖ್ಯದ್ವಾರದ ಹೊರಗೆ ಇಡಲಾಗುತ್ತದೆ.

ನಂತರ ಯಮದೇವನಲ್ಲಿ ಪ್ರಾರ್ಥಿಸಿ ತಮಗೆ ಹಾಗೂ ತಮ್ಮ ಕುಟುಂಬದವರಿಗೆ ರಕ್ಷಣೆ ನೀಡುವಂತೆ ಪ್ರಾರ್ಥಿಸಲಾಗುತ್ತದೆ. ಈ ಪೂಜೆಯನ್ನು ಮಾಡಲು ವರ್ಷಕ್ಕೊಮ್ಮೆ ಮಾತ್ರ ಅವಕಾಶವಿದೆ.

Must Read