ನೀರು ನಮ್ಮ ಬದುಕಿನ ಆಧಾರ. ಆದರೆ ನೀರು ಕುಡಿಯುವ ವಿಧಾನ, ಸಮಯ ಮತ್ತು ಯಾವ ಪಾತ್ರೆಯಿಂದ ಕುಡಿಯುತ್ತೇವೆ ಎಂಬುದೂ ಆರೋಗ್ಯಕ್ಕೆ ಮಹತ್ವದ್ದಾಗಿದೆ. ಹಳೆಯ ಸಂಪ್ರದಾಯಗಳಲ್ಲಿ ಪಾತ್ರೆಗಳ ಪ್ರಕಾರ ನೀರಿನ ಶಕ್ತಿ ಬದಲಾಗುತ್ತದೆ ಎಂದು ನಂಬಿಕೆ ಇತ್ತು. ಈಗ ವಿಜ್ಞಾನವೂ ಅದನ್ನು ಕೆಲ ಅಂಶಗಳಲ್ಲಿ ಸಮರ್ಥಿಸಿದೆ. ಹಾಗಾದರೆ ಯಾವ ಸಮಯದಲ್ಲಿ ಯಾವ ಪಾತ್ರೆಯಿಂದ ನೀರು ಕುಡಿಯುವುದು ಉತ್ತಮ ಎಂದು ತಿಳಿದುಕೊಳ್ಳೋಣ.
ಬೆಳಿಗ್ಗೆ ತಾಮ್ರದ ಪಾತ್ರೆಯ ನೀರು
ಬೆಳಗ್ಗೆ ಎದ್ದ ತಕ್ಷಣ ತಾಮ್ರದ ಪಾತ್ರೆಯಲ್ಲಿ ಇಟ್ಟ ನೀರನ್ನು ಕುಡಿಯುವುದು ಉತ್ತಮ. ತಾಮ್ರದ ಪಾತ್ರೆಯಲ್ಲಿ ಹಿಂದಿನ ರಾತ್ರಿ ತುಂಬಿದ್ದ ನೀರು ದೇಹದ ವಿಷಕಾರಿ ಅಂಶಗಳನ್ನು ಹೊರಹಾಕಿ ಜೀರ್ಣಕ್ರಿಯೆಯನ್ನು ಬಲಪಡಿಸುತ್ತದೆ. ಇದರಿಂದ ಇಮ್ಯೂನಿಟಿ ಕೂಡ ಹೆಚ್ಚುತ್ತದೆ.

ದಿನದ ವೇಳೆಯಲ್ಲಿ ಮಣ್ಣಿನ ಕುಡಿಗೆ ನೀರು
ಮಧ್ಯಾಹ್ನ ಅಥವಾ ಬಿಸಿಲಿನ ಹೊತ್ತಿನಲ್ಲಿ ಮಣ್ಣಿನ ಪಾತ್ರೆಯ ನೀರು ಕುಡಿಯುವುದು ಆರೋಗ್ಯಕರ. ಮಣ್ಣಿನ ಪಾತ್ರೆ ನೀರನ್ನು ಸ್ವಾಭಾವಿಕವಾಗಿ ತಂಪಾಗಿರಿಸುತ್ತದೆ. ಇದರಿಂದ ದೇಹದ ತಾಪಮಾನ ಸಮತೋಲನದಲ್ಲಿ ಇರುತ್ತದೆ ಮತ್ತು ದೇಹಕ್ಕೆ ಶಕ್ತಿ ತುಂಬುತ್ತದೆ.

ಹಗಲು ಹೊತ್ತಿನಲ್ಲಿ ಗಾಜಿನ ಪಾತ್ರೆ
ಆಫೀಸ್ ಅಥವಾ ಕೆಲಸದ ಸಮಯದಲ್ಲಿ ಗಾಜಿನ ಬಾಟಲಿಯಲ್ಲಿರುವ ನೀರು ಕುಡಿಯುವುದು ಸೂಕ್ತ. ಗಾಜು ಯಾವುದೇ ರಾಸಾಯನಿಕ ಅಂಶಗಳನ್ನು ನೀರಿಗೆ ಸೇರಿಸುವುದಿಲ್ಲ. ದೀರ್ಘಕಾಲದ ಆರೋಗ್ಯಕ್ಕಾಗಿ ಇದು ಒಳ್ಳೆಯದು.

ಸಂಜೆ ಹೊತ್ತಿನಲ್ಲಿ ಸ್ಟೀಲ್ ಪಾತ್ರೆ
ಸಂಜೆಯ ಹೊತ್ತಿನಲ್ಲಿ ಅಥವಾ ವ್ಯಾಯಾಮದ ನಂತರ ಸ್ಟೀಲ್ ಬಾಟಲಿಯ ನೀರು ಕುಡಿಯುವುದು ಉತ್ತಮ. ಇದು ದೇಹದ ಹೈಡ್ರೇಶನ್ ಬೇಗನೆ ಪೂರೈಸುತ್ತದೆ ಮತ್ತು ಶಕ್ತಿಯನ್ನೂ ತುಂಬುತ್ತದೆ.

ರಾತ್ರಿ ಹೊತ್ತು ಮಣ್ಣಿನ ಪಾತ್ರೆಯ ನೀರು
ರಾತ್ರಿ ಮಲಗುವ ಮೊದಲು ಮಣ್ಣಿನ ಪಾತ್ರೆಯ ನೀರು ಕುಡಿಯುವುದು ಉತ್ತಮ. ಇದು ಆಹಾರವನ್ನು ಸುಲಭವಾಗಿ ಜೀರ್ಣವಾಗಲು ಸಹಾಯ ಮಾಡುತ್ತದೆ ಮತ್ತು ಉತ್ತಮ ನಿದ್ರೆ ನೀಡುತ್ತದೆ.
