ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಮೊದಲ ಬಾರಿಗೆ ಡೆಂಗ್ಯೂ ತಡೆಗಟ್ಟುವ QDENGA ಲಸಿಕೆಗೆ ಭಾರತೀಯ ಔಷಧ ಮಹಾನಿಯಂತ್ರಣ ಸಂಸ್ಥೆ (DCGI) ಅನುಮೋದನೆ ನೀಡಿದ್ದು, ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಇದು ಮಹತ್ವದ ಬೆಳವಣಿಗೆಯಾಗಿದೆ.
ಜಪಾನ್‌ನ ಟಕೇಡಾ ಸಂಸ್ಥೆ ಅಭಿವೃದ್ಧಿಪಡಿಸಿರುವ ಈ ಲಸಿಕೆಯನ್ನು 4ರಿಂದ 60 ವರ್ಷದವರವರೆಗೆ ಬಳಸಲು ಅನುಮತಿ ನೀಡಲಾಗಿದೆ.
ಎರಡು ಡೋಸ್, ಪರೀಕ್ಷೆ ಅಗತ್ಯವಿಲ್ಲ
ಈ ಲಸಿಕೆಯನ್ನು ಎರಡು ಹಂತಗಳಲ್ಲಿ ನೀಡಲಾಗುತ್ತದೆ. ಮೊದಲ ಡೋಸ್ ಬಳಿಕ ಮೂರು ತಿಂಗಳ ಅಂತರದಲ್ಲಿ ಎರಡನೇ ಡೋಸ್ ನೀಡಲಾಗುತ್ತದೆ. ಲಸಿಕೆ ಪಡೆಯುವ ಮೊದಲು ಡೆಂಗ್ಯೂ ಪರೀಕ್ಷೆ ಮಾಡಿಸಬೇಕಾದ ಅಗತ್ಯವಿಲ್ಲ. ಇದು ವೈರಸ್‌ನ ನಾಲ್ಕೂ ರೂಪಗಳ ವಿರುದ್ಧ ರಕ್ಷಣೆ ನೀಡುವಂತೆ ರೂಪಿಸಲಾಗಿದೆ.
ಇದನ್ನೂ ಓದಿ:
43 ದೇಶಗಳಲ್ಲಿ ಬಳಕೆ
ಲಸಿಕೆಯ ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಸಾವಿರಾರು ಜನರ ಮೇಲೆ ಕ್ಲಿನಿಕಲ್ ಪರೀಕ್ಷೆಗಳ ಮೂಲಕ ದೃಢಪಡಿಸಲಾಗಿದೆ. ಈಗಾಗಲೇ 43 ದೇಶಗಳಲ್ಲಿ ಈ ಲಸಿಕೆಗೆ ಅನುಮೋದನೆ ದೊರೆತಿದ್ದು, ವಿಶ್ವ ಆರೋಗ್ಯ ಸಂಸ್ಥೆಯೂ (WHO) ಡೆಂಗ್ಯೂ ಹೆಚ್ಚಿರುವ ಪ್ರದೇಶಗಳಲ್ಲಿ ಇದರ ಬಳಕೆಯನ್ನು ಶಿಫಾರಸು ಮಾಡಿದೆ.



