September 14, 2026
Monday, September 14, 2026
spot_img

ಈಗಲೇ ಸಣ್ಣ ಆಗಿಬಿಡಬೇಕು ಅನ್ನೋರು ತೂಕ ಇಳಿಕೆ ಬಗ್ಗೆ ಈ ವಿಷಯ ತಿಳಿದುಕೊಳ್ಳಿ! ಫನ್‌ ಫ್ಯಾಕ್ಸ್ಟ್‌ ಇಲ್ಲಿದೆ

ತೂಕ ಇಳಿಸಬೇಕು ಅಂದ್ರೆ ಎರ್ರಾಬಿರ್ರಿ ವ್ಯಾಯಾಮ ಮಾಡ್ಬೇಕು, ಸಾವಿರ ಸಾವಿರ ಹೆಜ್ಜೆ ನಡೀಬೇಕು, ಊಟ ತಿಂಡಿ ಬಿಟ್ಟುಬಿಡಬೇಕು! ಇದು ಸಾಕಷ್ಟು ಜನರ ನಂಬಿಕೆ. ಆದರೆ ನಿಜಕ್ಕೂ ತೂಕ ಇಳಿಕೆ ಆಗೋದು ಹೀಗೇನಾ? ತೂಕ ಇಳಿಕೆ ಬಗ್ಗೆ ಫನ್‌ ಫ್ಯಾಕ್ಟ್ಸ್‌ ಇಲ್ಲಿದೆ ನೋಡಿ..

ನಿಮ್ಮ ದೇಹದಲ್ಲಿ ತೂಕ ಇಳಿಕೆಯಾಗುವಾಗ ಫ್ಯಾಟ್‌ ಕಾರ್ಬನ್‌ ಡೈ ಆಕ್ಸೈಡ್‌ ಹಾಗೂ ಆಮ್ಲಜನಕವಾಗಿ ಬದಲಾಗುತ್ತದೆ. ಆನಂತರ ನಿಮ್ಮ ದೇಹದಿಂದ ಯೂರಿನ್‌ ಅಥವಾ ಬೆವರಿನ ಮೂಲಕ ಹೊರಗೆ ಹೋಗುತ್ತದೆ.

ಒಂದೇ ಜಾಗದಿಂದ ಫ್ಯಾಟ್‌ ತೆಗೆಯೋಕೆ ಸಾಧ್ಯವಿಲ್ಲ. ನಾನು ನೂರು ಬಾರಿ ಕೂತು ಏಳ್ತೀನಿ. ನನ್ನ ಹೊಟ್ಟೆಯ ಫ್ಯಾಟ್‌ ಕರಗಿಹೋಗುತ್ತದೆ ಅನ್ನೋದು ಸುಳ್ಳು. ಫ್ಯಾಟ್‌ ಇಡೀ ದೇಹದಿಂದ ಹೊರಗೆ ಹೋಗುತ್ತದೆ.

ಫ್ಯಾಟ್‌ ಬರ್ನ್‌ ಆಗೋದಕ್ಕೂ ಪ್ರೋಟೀನ್‌ ಬೇಕೇಬೇಕು.

ಜಾಸ್ತಿ ಹಸಿವಾಗೋದು, ಹಸಿವಾಗದೇ ಇರೋದು ನಿಮ್ಮ ನಿದ್ದೆಯ ಮೇಲೆ ನಿರ್ಧರಿತವಾಗಿದೆ. ಸ್ಲೀಪ್‌ ಹಾರ್ಮೋನ್‌ ಗೆರ್ಲಿನ್‌ ಹೆಚ್ಚಾದರೆ ಜಂಕ್‌ ಫುಡ್‌ ಸೇವನೆ ಮಾಡುವ ಆಸೆ ಆಗುತ್ತದೆ.

ತಣ್ಣಗಿನ ನೀರು ಕುಡಿಯೋದು ತೂಕ ಇಳಿಕೆಗೆ ಉತ್ತಮ. ನೀರನ್ನು ಎನರ್ಜಿಯಾಗಿ ಕನ್ವರ್ಟ್‌ ಮಾಡಲು ದೇಹ ಬಿಸಿಯಾಗಬೇಕು. ಆಗಲೂ ಕ್ಯಾಲೋರಿ ಬರ್ನ್‌ ಆಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !