July 21, 2026
Tuesday, July 21, 2026
spot_img

ಫ್ಯಾನ್ಸ್‌ಗೆ ಗುಡ್‌ನ್ಯೂಸ್‌ ಕೊಟ್ಟ ಅರಿಜಿತ್‌ ಸಿಂಗ್‌, ಇಮ್ರಾನ್‌ ಹಶ್ಮಿ ಸಿನಿಮಾ ಹಾಡಿನಿಂದ ಕಮ್‌ಬ್ಯಾಕ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಈ ವರ್ಷದ ಆರಂಭದಲ್ಲಿ ಹಿನ್ನೆಲೆ ಗಾಯನಕ್ಕೆ ನಿವೃತ್ತಿ ಘೋಷಿಸಿ ಅಭಿಮಾನಿಗಳಿಗೆ ಶಾಕ್‌ ನೀಡಿದ್ದ ಅರಿಜಿತ್‌ ಸಿಂಗ್‌ ಇದೀಗ ಮತ್ತೆ ಮೈಕ್‌ ಹಿಡಿಯೋದಕ್ಕೆ ಸಿದ್ಧರಾಗಿದ್ದಾರೆ. ಇಮ್ರಾನ್ ಹಶ್ಮಿ ಅಭಿನಯದ ಬಹುನಿರೀಕ್ಷಿತ ‘ಆವಾರಾಪನ್ 2’ ಚಿತ್ರದ ವಿಶೇಷ ಹಾಡೊಂದಕ್ಕೆ ಅರಿಜಿತ್ ಸಿಂಗ್ ಧ್ವನಿಯಾಗಿದ್ದಾರೆ.

ನಿವೃತ್ತಿ ಘೋಷಣೆಯ ನಂತರ ಬಿಡುಗಡೆಯಾಗುತ್ತಿರುವ ಅರಿಜಿತ್ ಅವರ ಮೊದಲ ಹಿನ್ನೆಲೆ ಗೀತೆ ಇದಾಗಿದ್ದು, ಈ ಹಾಡು ಇಂದೇ (ಜುಲೈ 21) ಬಿಡುಗಡೆಯಾಗಲಿದೆ. ‘ಆವಾರಾಪನ್ 2’ ಚಿತ್ರವು ‘ವಿಶೇಷ್ ಫಿಲ್ಮ್ಸ್’ ಬ್ಯಾನರ್ ಅಡಿಯಲ್ಲಿ ಮೂಡಿಬಂದಿದೆ. ಅರಿಜಿತ್ ಸಿಂಗ್ ಮತ್ತು ‘ವಿಶೇಷ್ ಫಿಲ್ಮ್ಸ್’ ಬ್ಯಾನರ್ ನಡುವಿನ ಬಾಂಧವ್ಯ ಕಳೆದ 15 ವರ್ಷಗಳಿಂದ ಬೆಳೆದು ಬಂದಿದೆ. ಅರಿಜಿತ್ ಅವರ ಪ್ರತಿಭೆಯನ್ನು ಆರಂಭದಲ್ಲೇ ಗುರುತಿಸಿ, ‘ಮರ್ಡರ್ 2’ ಚಿತ್ರದ ‘ಫಿರ್ ಮೊಹಬ್ಬತ್’ ಹಾಡಿನ ಮೂಲಕ ಅವರಿಗೆ ದೊಡ್ಡ ಬ್ರೇಕ್ ನೀಡಿದ್ದೇ ಇದೇ ವಿಶೇಷ್ ಫಿಲ್ಮ್ಸ್.

ಆ ನಂತರ ಈ ಯಶಸ್ವಿ ಕಾಂಬಿನೇಷನ್‌ನಲ್ಲಿ ಸಾಲು ಸಾಲು ಹಿಟ್ ಹಾಡುಗಳು ಮೂಡಿಬಂದಿದ್ದವು. ಮುಸ್ಕುರಾನೆ (‘ಸಿಟಿಲೈಟ್ಸ್’), ಖಾಮೋಶಿಯಾ, ಹಮಾರಿ ಅಧೂರಿ ಕಹಾನಿ ಮುಂತಾದ ಹಿಟ್‌ ಹಾಡುಗಳನ್ನು ಈ ಬ್ಯಾನರ್‌ನಲ್ಲಿ ಅರಿಜಿತ್‌ ಹಾಡಿದ್ದಾರೆ. ಇದೀಗ ‘ಆವಾರಾಪನ್ 2’ ಚಿತ್ರದ ಮೂಲಕ ಈ ಹಿಟ್ ಜುಗಲ್‌ಬಂದಿ ಮತ್ತೊಮ್ಮೆ ಮುನ್ನೆಲೆಗೆ ಬಂದಂತಾಗಿದೆ. ಯಾವ ಸಿನಿಮಾದಿಂದಲಾದ್ರೂ ಬರಲಿ ಒಟ್ಟಾರೆ ಅರಿಜಿತ್‌ ದನಿ ಮತ್ತೆ ಕೇಳಬೇಕು ಎಂದುಕೊಂಡಿದ್ದ ಫ್ಯಾನ್ಸ್‌ ಇದೀಗ ಖುಷಿಪಟ್ಟಿದ್ದಾರೆ. ಅರಿಜಿತ್‌ ಹಾಡಿಗಾಗಿ ಕಾಯ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !